ಉಡುಪಿ : ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಯುವಕರ ತಂಡ ಮಧ್ಯರಾತ್ರಿ ರಕ್ಷಿಸಿರುವ ಘಟನೆ ಕುಕ್ಕಿಕಟ್ಟೆಯಲ್ಲಿ ನಡೆದಿದೆ. ಬಾಲಕೃಷ್ಣ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಮಗಳ ಮದುವೆಗೆ ಹಣ ಹೊಂದಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ಕುರ್ಕಾಲುವಿನ ಪಾಪನಾಶಿನಿ ನದಿಗೆ ಹಾರಿದ ಬಾಲಕೃಷ್ಣ ಭಟ್ ಅವರನ್ನು ರಾತ್ರೋರಾತ್ರಿ ಈಶ್ವರ್ ಮಲ್ಪೆ ಮತ್ತು ಸತ್ಯದ ತುಳುವೆರ್ ತಂಡದ ಯುವಕರು ಕಾರ್ಯಾಚರಣೆ ಮಾಡಿ ರಕ್ಷಿಸಿದೆ. ಗಾಳಿ, ಮಳೆ ಲೆಕ್ಕಿಸದೆ ರಕ್ಷಿಸಿರುವ ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Advertisement. Scroll to continue reading.