ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಗಂಗೊಳ್ಳಿಯ ಸಮಾಜ ಸೇವಕ ಇಬ್ರಾಹಿಮ್ ಅವರನ್ನು ಸನ್ಮಾನಿಸಲಾಯಿತು. ಹಗಲು ರಾತ್ರಿ ಎನ್ನದೇ ಕಷ್ಟದಲ್ಲಿರುವ ಜನರಿಗೆ ಆ್ಯಂಬುಲೆನ್ಸ್ ಸೇವೆಯನ್ನು ಬಹಳ ವರ್ಷಗಳಿಂದಲೂ ನೀಡುತ್ತಾ ಬಂದಿರುವ ಇಬ್ರಾಹಿಂ ಅವರನ್ನು ಗೌರವಿಸಲಾಯಿತು.
ರೋ. ಸುಗುಣಾ ಅವರು ಪರಿಚಯಿಸಿದರು. ಈ ಸಂದರ್ಭ ರೋ.ಗಿರೀಶ್, ರೋ.ಕೃಷ್ಣ, ಉಪಸ್ಥಿತರಿದ್ದರು. ಕ್ಲಬ್ ಅಧ್ಯಕ್ಷ ರೋ.ರಾಜೇಶ್ ಎಂ. ಜಿ. ಸ್ವಾಗತಿಸಿದರು.ಕಾರ್ಯದರ್ಶಿ ರೋ.ನಾರಾಯಣ ನಾಯ್ಕ ವಂದಿಸಿದರು.
Advertisement. Scroll to continue reading.