ಹಿರಿಯಡಕ : 2020 -21 ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕ ಅತೀ ಹೆಚ್ಚು ಅಂಕ ಗಳಿಸಿದ ನಾಲ್ವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರಥಮ ಸ್ಥಾನ ಪಡೆದ ಕುಮಾರಿ ಸಾಕ್ಷ (611 ಅಂಕ), ದ್ವಿತೀಯ ಸ್ಥಾನ ಪಡೆದ ಕು. ಪ್ರಖ್ಯಾತ ಪಿ ನಾಯಕ (605 ಅಂಕ) ಮತ್ತು ಕುಮಾರಿ ಮಾನ್ವಿ (605)
ಹಾಗೂ ತ್ರತೀಯ ಸ್ಥಾನ ಪಡೆದ ಕುಮಾರಿ ಖುಷಿ ಪೂಜಾರಿ (602 ಅಂಕ) ಇವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಾನ್ಯ ಶ್ರೀ ಎನ್ . ಹೆಚ್. ನಾಗೂರ ಇವರು ಅಭಿನಂದಿಸಿದರು. ಈ ಸಂದರ್ಭ ಪ್ರಾಂಶುಪಾಲರಾದ ಶ್ರೀ ಮಂಜುನಾಥ ಭಟ್ ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.
Advertisement. Scroll to continue reading.