ರಾಜ್ಯ

ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2019-20ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳ ಪ್ರದಾನ ಸಮಾರಂಭ

0

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನೀಡಲಾಗುವಂತ 2019-20ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳಿಗೆ ಆಯ್ಕೆಯಾದವರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಹೀಗೆ ಪ್ರಶಸ್ತಿ ಪುರಸ್ಕೃತರಿಗೆ ಇಂದು ನಡೆಯಲಿರುವಂತ ಸರಳ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆ.ಬಿ.ಕಿರಣ್ ಹೇಳಿದ್ದಾರೆ.

ಇಂದು ಸಂಜೆ 6.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ವಿ.ಸುನೀಲ್ ಕುಮಾರ್ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿ :

Advertisement. Scroll to continue reading.
  1. ಶ್ರೀ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ – ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ
  2. ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ – ಡಾ|| ಪಂ. ನರಸಿಂಹಲು ವಡವಾಟಿ
  3. ಬಸವ ರಾಷ್ಟ್ರೀಯ ಪ್ರಶಸ್ತಿ – ಶ್ರೀ ಬಸವಲಿಂಗ ಪಟ್ಟದೇವರು
  4. ನಾಟ್ಯರಾಣಿ ಶಾಂತಲಾ ಪ್ರಶಸ್ತಿ – ಶ್ರೀಮತಿ ಬಿ.ಕೆ. ವಸಂತಲಕ್ಷ್ಮಿ
  5. ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ – ಶ್ರೀ ಚಿ.ಸು. ಕೃಷ್ಣಶೆಟ್ಟಿ
  6. ಜಕಣಾಚಾರಿ ಪ್ರಶಸ್ತಿ – ಶ್ರೀ ಬಿ.ಎಸ್. ಯೋಗಿರಾಜ
  7. ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ – ಶ್ರೀ ಮದಿರೆ ಮರಿಸ್ವಾಮಿ
  8. ಜಾನಪದಶ್ರೀ ಪ್ರಶಸ್ತಿ – ಶ್ರೀ ಬಿ. ಟಾಕಪ್ಪ ಕಣ್ಣೂರು
  9. ಸಂಗೊಳ್ಳಿ ರಾಯಣ್ಣ ಪ್ರಶಸ್ತಿ – ಶ್ರೀ ರಾ.ನಂ. ಚಂದ್ರಶೇಖರ
  10. ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ – ಡಾ|| ಚೂಡಾಮಣಿ ನಂದಗೋಪಾಲ್
  11. ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ – ಪ್ರೊ. ಸಿದ್ದಣ್ಣ ಉತ್ನಾಳ
  12. ಅಕ್ಕಮಹಾದೇವಿ ಪ್ರಶಸ್ತಿ – ಡಾ. ಜಯಶ್ರೀ ದಂಡೆ
  13. ನಿಜಗುಣ ಪುರಂದರ ಪ್ರಶಸ್ತಿ – ಶ್ರೀಮತಿ ಗೌರಿ ಕುಪ್ಪುಸ್ವಾಮಿ
  14. ಸಂತಶಿಶುನಾಳ ಶರೀಫ ಪ್ರಶಸ್ತಿ – ಪಂ. ವಾದಿರಾಜ ನಿಂಬರಗಿ
  15. ಕುಮಾರವ್ಯಾಸ ಪ್ರಶಸ್ತಿ – ಶ್ರೀಮತಿ ಗಂಗಮ್ಮ ಕೇಶವಮೂರ್ತಿ

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com