ಹೈದರಾಬಾದ್: ಹದಿನೆಂಟು ತಿಂಗಳ ಮಗುವನ್ನು ಥಳಿಸಿದ ಆರೋಪದಡಿ 22 ವರ್ಷದ ಮಹಿಳೆಯನ್ನು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಬಂಧಿಸಲಾಗಿದೆ. ತುಳಸಿ ಬಂಧಿತ ಮಹಿಳೆ.
ತುಳಸಿ ತನ್ನ ಮಗುವನ್ನು ನಿರ್ದಯವಾಗಿ ಥಳಿಸಿದ ವಿಡಿಯೋಗಳು ವೈರಲ್ ಆದ ನಂತರ ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶವನ್ನು ಹುಟ್ಟು ಹಾಕಿದೆ.
ವಡಿವಾಜಗನ್ ಐದು ವರ್ಷದ ಹಿಂದೆ ತುಳಸಿ ಎಂಬುವವರನ್ನು ವಿವಾಹವಾದರು ಮತ್ತು ದಂಪತಿಗಳು ತಮಿಳುನಾಡಿನ ಮೋತ್ತೂರು ಗ್ರಾಮದಲ್ಲಿ ವಾಸವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ವಡಿವಾಜಗನ್ ಮತ್ತು ತುಳಸಿ ನಿರಂತರ ಜಗಳದಿಂದಾಗಿ ತುಳಸಿ ಗಂಡನನ್ನು ಬಿಟ್ಟು ತನ್ನ ಹೆತ್ತವರ ಮನೆಗೆ ಹೋಗಿದ್ದಳು ಎನ್ನಲಾಗಿದೆ. ಈ ಮಧ್ಯೆ ತನ್ನ ಗೆಳೆಯನಿಗಾಗಿ ತುಳಸಿ ತನ್ನ ಮಗನನ್ನು ಹಿಂಸಿಸಿದಳೆಂದು ಶಂಕೆ ವ್ಯಕ್ತವಾಗಿದೆ.. ತುಳಸಿಯು ಮಗುವಿಗೆ ಕ್ರೂರವಾಗಿ ಹೊಡೆಯುತ್ತಿದ್ದಳು.ಮತ್ತು ಅದನ್ನು ಫೋನಿನಲ್ಲಿ ವೀಡಿಯೋ ಮಾಡುತ್ತಿದ್ದಳು. ತುಳಸಿಯ ಸಂಬಂಧಿಕರು ಆಕೆಯು ಮಗುವಿಗೆ ಹೊಡೆಯುವ ವಿಡಿಯೋಗಳನ್ನು ನೋಡಿದಾಗ, ಅವರು ತಕ್ಷಣವೇ ಅವುಗಳ ಬಗ್ಗೆ ವಡಿವಾಜಗನ್ ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
Advertisement. Scroll to continue reading.