ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ರೋಟರಿ ಬಾರಕೂರು ವತಿಯಿಂದ ಬಾರಕೂರು ನ್ಯಾಷನಲ್ ಜ್ಯೂನಿಯರ್ ಕಾಲೇಜಿಗೆ ಬುಧವಾರ ಪ್ರಿಂಟರ್ನ್ನು ರೋಟರಿ ಅಧ್ಯಕ್ಷ ಚರಣ್ ಬಿ. ಶೆಟ್ಟಿ ಕೊಡುಗೆಯಾಗಿ ನೀಡಿದರು. ಈ ಸಂದರ್ಭ ಅವರು ಮಾತನಾಡಿ, ಶಿಕ್ಷಣದಲ್ಲಿ ಆಧುನಿಕ ತಂತ್ರಜ್ಞಾನ ವ್ಯವಸ್ಥೆಗೆ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಪೂರಕವಾದ ವಸ್ತುಗಳನ್ನು ದಾನಿಗಳು ಮತ್ತು ಹಳೆ ವಿದ್ಯಾರ್ಥಿಗಳು ಸಂಘ ಸಂಸ್ಥೆಗಳು ನೀಡುವಂತಾಗಬೇಕು ಎಂದರು.
ಶಿಕ್ಷಣ ಇಲಾಖೆಯ ಪರೀವೀಕ್ಷಣಾಧಿಕಾರಿ ಚಂದ್ರ ಶೇಖರ ಶೆಟ್ಟಿ, ಶಾಲಾ ಸಂಚಾಲಕ ಗೋಪಾಲ್ ನಾಯ್ಕ್, ರೋಟರಿಯ ರತ್ನಾಕರ ಶೆಟ್ಟಿ, ಅಬ್ದುಲ್ ಮುಬಾರಕ್, ಸುಧಾಕರ ರಾವ್, ಪದವಿ ಪೂರ್ವ ಕಾಲೇಜು ವಿಭಾಗದ ಕೊಟ್ರಸ್ವಾಮಿ, ಹೈಸ್ಕೂಲು ವಿಭಾಗದ ಹೇಮಾವತಿ ಉಪಸ್ಥಿತರಿದ್ದರು.
Advertisement. Scroll to continue reading.