ಚಂದನವನ : ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಪುತ್ರನಿಗೆ ಹೆಸರಿಡುವ ಸಮಯ ಬಂದಿದೆ. ಈಗಾಗಲೇ ಜೂ.ಚಿರು ಸೋಶಿಯಲ್ ಮೀಡಿಯಾದಲ್ಲಿ ಫುಲ್ ಫೇಮಸ್. ಮಗನ ಫೋಟೋ, ವೀಡಿಯೋಗಳನ್ನು ಮೇಘನಾ ಆಗಾಗ್ಗೆ ಶೇರ್ ಮಾಡುತ್ತಿರುತ್ತಾರೆ. ಸಿಕ್ಕಾಪಟ್ಟೆ ವೈರಲ್ ಕೂಡ ಆಗುತ್ವೆ. ಆದರೆ, ಮಗುವಿಗೆ ಹೆಸರು ಮಾತ್ರ ಇಟ್ಟಿರಲಿಲ್ಲ. ಜೂ.ಚಿರು, ಸಿಂಬ, ಚಿಂಟು, ಬರ್ಫಿ, ಚಿರು ಬಚ್ಚ, ಮರಿ ಸಿಂಗ, ಕುಟ್ಟಿ ಪಾಪ ಮೊದಲಾದ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದಾನೆ. ಇದೀಗ ಆತನಿಗೆ ಹೆಸರಿಡುವ ಸಮಯ ಬಂದಿದ್ದು ನಾಳೆ(ಸೆ.3) ಮಗನ ಹೆಸರು ರಿವೀಲ್ ಮಾಡುವುದಾಗಿ ಮೇಘನಾ ಹೇಳಿದ್ದಾರೆ. ಈ ಬಗ್ಗೆ ಮೇಘನಾ, ಧ್ರುವ ಸರ್ಜಾ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹರಿಬಿಟ್ಟಿದ್ದಾರೆ. ಈ ವೀಡಿಯೋದಲ್ಲಿ ಮೇಘನಾ ನಿಶ್ಚಿತಾರ್ಥ, ಮದುವೆ , ಮಗು ಜನನ, ಮಗುವಿನ ನಾನಾ ಹೆಸರುಗಳಿದ್ದು, ಸೆಪ್ಟಂಬರ್ 3 ರಂದು ಹೆಸರು ರಿವೀಲ್ ಮಾಡುವುದಾಗಿ ತಿಳಿಸಲಾಗಿದೆ. ಜೂ.ಚಿರು ಹೆಸರಿನ ಕುತೂಹಲ ತಣಿಯಲು ನಾಳೆಯ ವರೆಗೂ ಕಾಯಬೇಕು.