ಪಾಟ್ನಾ : ಬಿಹಾರದ ವಿವಿದೆಡೆ ಸಿಡಿಲು ಬಡಿದು 8 ಮಂದಿ ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಗಾಯಗೊಂಡವರಲ್ಲಿ ಹಲವರು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ಬಂಕಾ ಜಿಲ್ಲೆಯ ಕಾಮತ್ಪುರ್ ಓರ್ವ ಮಹಿಳೆ ಸಾವನ್ನಪ್ಪಿದ್ದು, ಪುರನ್ಭಿಘ್ ಪ್ರದೇಶದಲ್ಲಿ ಓರ್ವ ಸಿಡಿಲಿಗೆ ಬಲಿಯಾಗಿ, ಮತ್ತೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ವೆಸ್ಟ್ ಚಾಂಪರನ್ ಜಿಲ್ಲೆಯ ಇಬ್ಬರು ಸಹೋದರರಿಗೆ ಸಿಡಿಲು ಬಡಿದಿದ್ದು, ಓರ್ವ ಸಾವನ್ನಪ್ಪಿದ್ದು, ಓರ್ವ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಲ್ಲಿನ ಭಾಘಾ ನಗರ ಪ್ರದೇಶದ ದೇವಾಲಯ ಪೂಜಾರಿಯೊಬ್ಬರಿಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Advertisement. Scroll to continue reading.