ಟೋಕಿಯೋ ಪ್ಯಾರಾಲಿಂಪಿಕ್ಸ್ : ಅವನಿ ಮಹಿಳೆಯರ 50 ಮೀಟರ್ನ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಟೋಕಿಯೊ ಪ್ಯಾರಾಲಿಂಪಿಕ್ 2020ರಲ್ಲಿ (Tokyo Paralympics 2020) ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಅವನಿ ಲೆಕೇರಾ ಈಗ ಮತ್ತೊಂದು ಪದಕಕ್ಕೆ ಮುತ್ತಿಕ್ಕಿದ್ದಾರೆ.
ಮಹಿಳೆಯರ 50 ಮೀಟರ್ನ ರೈಫಲ್ 3 ಪೊಸಿಶನ್ಸ್ ಎಸ್ ಎಚ್ 1ರ ವಿಭಾಗದ ಶೂಟಿಂಗ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ತಮ್ಮದಾಗಿಸಿದ್ದಾರೆ. ಅವನಿ ಶೂಟಿಂಗ್ ನ ಫೈನಲ್ ಪಂದ್ಯದಲ್ಲಿ 415 ಸ್ಕೋರ್ ಮಾಡಿದರು. ಇದಕ್ಕೂ ಮುನ್ನ ಇವರು 10 ಮೀಟರ್ ನ ಏರ್ ರೈಫಲ್ ಶೂಟಿಂಗ್ ನಲ್ಲಿ 249.6 ಸ್ಕೋರ್ ಮಾಡಿ ವಿಶ್ವ ದಾಖಲೆ ನಿರ್ಮಿಸಿ ಚಿನ್ನ ಗೆದ್ದಿದ್ದರು.
Advertisement. Scroll to continue reading.