ವರದಿ : ದಿನೇಶ್ ರಾಯಪ್ಪನಮಠ
ಕೋಟ: ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ವಡ್ಡರ್ಸೆ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 167ನೇ ಜಯಂತಿ ಪ್ರಯುಕ್ತ ಸತ್ಯನಾರಾಯಣ ಪೂಜೆ ಹಾಗೂ ಮಧುವನ ,ವಡ್ಡರ್ಸೆ ಭಾಗದ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ,ಸನ್ಮಾನ ಕಾರ್ಯಕ್ರಮ ವಡ್ಡರ್ಸೆ ಎಂ.ಜಿ ಕಾಲೋನಿಯಲ್ಲಿ ಬುಧವಾರ ಜರಗಿತು.
ಈ ಸಂದರ್ಭದಲ್ಲಿ ಹೌಂದೇರಾಯನ ಜಾನಪದ ನೃತ್ಯಕಲಾವಿದ ಮಂಜ ಪೂಜಾರಿ,ದೈವಿ ಪಾತ್ರಿ ನರಸಿಂಹ ಕೆ ಬತ್ತಡ,ನಿವೃತ್ತ ಶಿಕ್ಷಕ ಬಸವ ಪೂಜಾರಿ ಪರವಾಗಿ ಅಣ್ಣಪ್ಪ ಪೂಜಾರಿ,ಯುವ ಸಂಘಟಕಿ ಪುಷ್ಭಾ ಕೆ ಹಂದಟ್ಟು, ಸಮುದಾಯದಲ್ಲಿ ವಕೀಲರಾಗಿ ಸೇವೆಸಲ್ಲಿಸುತ್ತಿರುವ ರಾಜು ಶ್ರೀಯಾನ್ ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಸೇವಾ ಸಂಘ ವಡ್ಡರ್ಸೆ ಇದರ ಅಧ್ಯಕ್ಷೆ ಶಾರದ ರಾಮ ಪೂಜಾರಿ ವಹಿಸಿದರು.
ಮುಖ್ಯ ಅತಿಥಿಗಳಾಗಿ ಬಿಲ್ಲವ ಸಂಘದ ಗೌರವಾಧ್ಯಕ್ಷ ಕೆ.ಪಿ ಕೋಟಿ ಪೂಜಾರಿ,ಶಿರಿಯಾರ ಬಿಲ್ಲವ ಸೇವಾ ಸಂಘದ ಮಾಜಿ ಅಧ್ಯಕ್ಷ ನಾಗರಾಜ ಪೂಜಾರಿ,ವಡ್ಡರ್ಸೆ ಬಿಲ್ಲವ ಸೇವಾ ಸಂಘದ ಕಾರ್ಯದರ್ಶಿ ರತ್ನ ಪೂಜಾರಿ ವಹಿಸಿದರು.
ಕಾರ್ಯಕ್ರಮವನ್ನು ಸಂಘದ ಸಲಹೆಗಾರ ರಾಜು ಶ್ರೀಯಾಬ್ ಸ್ವಾಗತಿಸಿ ನಿರೂಪಿಸಿದರು.
Advertisement. Scroll to continue reading.