ಬ್ರಹ್ಮಾವರ : ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ವಿಶ್ವಕರ್ಮ ಪೂಜೆ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಕನ್ಯಾ ಸಂಕ್ರಮಣದ ದಿನದಂದು ದೇಶದಾದ್ಯಂತ ನಡೆಯುವ ವಿಶ್ವಕರ್ಮ ಪೂಜೆ ಈ ಬಾರಿ ಸಾಂಕೇತಿಕವಾಗಿ ನಾನಾ ಭಾಗದಲ್ಲಿ ಜರುಗಿತು. ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಶಿಲ್ಪಕಲಾ ಸಂಘ ಇದರ ವತಿಯಿಂದ ಪುರೋಹಿತ್ ಪ್ರಶಾಂತ್ ಆಚಾರ್ಯ ಇವರಿಂದ ಯಜ್ಞ ಮೂಲಕ ಜರುಗಿತು. ದೇವಸ್ಥಾನದ ಆಡಳಿತ ಮೋಕ್ತೇಸರ ವಿ. ಶ್ರೀಧರ ಆಚಾರ್ಯ ವಡೇರಹೊಬಳಿ ದಂಪತಿಗಳು ಸಂಕಲ್ಪ ಪೂಜೆಯಲ್ಲಿದ್ದರು. ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಮತ್ತು ಶಿಲ್ಪಕಲಾ ಸಂಘದ ಪಧಾಧಿಕಾರಿಗಳು ಸಮಾಜ ಭಾಂದವರು ಪೂಜೆಯಲ್ಲಿ ಭಾಗವಹಿಸಿದ್ದರು.
ಬ್ರಹ್ಮಾವರ ಶ್ರೀ ಕಾಳಿಕಾಂಬಾ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ಪುರೋಹಿತ್ ಗೋಪಾಲಕೃಷ್ಣ ದೀಕ್ಷೀತ್ ಇವರ ಆಚಾರ್ಯತ್ವದಲ್ಲಿ ಮಂಡಲ ಮತ್ತು ಕಲಶದ ಮೂಲಕ ವಿಶ್ವಕರ್ಮ ಪೂಜಾ ಕಾರ್ಯ ಜರುಗಿತು.