ಕರಾವಳಿ

ಪರ್ಕಳ : ಉಡುಪಿ ಜಿಲ್ಲಾ ಗೋವಿಗಾಗಿ ಮೇವು ಸಂಘಟನೆ ವತಿಯಿಂದ ಹೊಸಬೆಳಕು ಆಶ್ರಮದಲ್ಲಿ ಪ್ರಧಾನಿ ಮೋದಿ ಜನ್ಮದಿನಾಚರಣೆ

0

ವರದಿ : ಬಿ.ಎಸ್.ಆಚಾರ್ಯ

ಪರ್ಕಳ : ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 71 ನೇ ಜನ್ಮದಿನದ ಅಂಗವಾಗಿ ಅನಾಥ ಗೋವುಗಳ ಸಂರಕ್ಷಣೆಗಾಗಿ ಹುಟ್ಟಿಕೊಂಡಿರುವ ಗೋವಿಗಾಗಿ ಮೇವು ಸಂಘಟನೆ ಉಡುಪಿ ಜಿಲ್ಲಾ ತಂಡದ ನೇತೃತ್ವದಲ್ಲಿ ಶುಕ್ರವಾರ ಸಂಜೆ ಪರ್ಕಳದ ಸರಳಬೆಟ್ಟು ಹೊಸಬೆಳಕು ಆಶ್ರಮದ ನಿವಾಸಿಗಳೊಂದಿಗೆ ಆಚರಿಸಲಾಯಿತು.

ವಿಶೇಷ ಚೇತನರು,ನಿರ್ಗತಿಕರು ಇರುವ ಹೊಸಬೆಳಕು ಆಶ್ರಮದಲ್ಲಿ ರುವ ಶತಾಯುಶಿ ಗಿರಿಜಾ ಅವರಿಂದ ದೀಪ ಬೆಳಗಿಸುವುದರ ಮೂಲಕ ರಾಷ್ಟ್ರ ಭಕ್ತ ನರೇಂದ್ರ ಮೋದಿಯವರಿಗೆ ಶತಾಯುಸ್ಸು ನೀಡಿ ಭಾರತ ದೇಶಕ್ಕೆ ಇನ್ನಷ್ಟು ಅವರಿಂದ ಸೇವೆ ಮಾಡುವ ಭಾಗ್ಯ ಭಗವಂತನು ನೀಡಲಿ ಎಂದು ಅವರು ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಘಟಕ, ಗೋವಿಗಾಗಿ ಮೇವು ಸ್ಥಾಪಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಮಾತನಾಡಿ, ವಿಶ್ವ ಕಂಡ ಶ್ರೇಷ್ಠ ನಾಯಕ ನರೇಂದ್ರ ಮೋದಿಯವರ ಜನ್ಮದಿನವನ್ನು
ಗೋವಿಗಾಗಿ ಮೇವು ಸಂಘಟನೆ ಮೂಲಕ 33ಕೋಟಿ ದೇವತೆಗಳಿಗೆ ಸಮಾನವಾದ ಗೋ ಮಾತೆಯಲ್ಲಿ ಮತ್ತು ಭಗವಂತ ನಲ್ಲಿ ಪ್ರಾರ್ಥನೆಯಾಗಿ ಮೋಧಿಜಿಯವರ ಸಮರ್ಥ ನಾಯಕತ್ವ ನಮ್ಮ ದೇಶಕ್ಕೆ ಮುಂದೆ ಕೂಡ ಇರುವಂತೆ ಅನುಗ್ರಹಿಸಲಿ ಎಂದರು.

ರಾತ್ರಿ ಇಲ್ಲಿನ ಆಶ್ರಮ ವಾಸಿಗಳಿಗೆ ಉತ್ತಮ ಭೋಜನ ನೀಡಲಾಯಿತು ಮತ್ತು ನೀಲಾವರ ಗೋಶಾಲೆಯಲ್ಲಿರುವ ಗೋವುಗಳಿಗೆ ಮೇವು ನೀಡಲಾಯಿತು.

Advertisement. Scroll to continue reading.

ಈ ಸಂದರ್ಭದಲ್ಲಿ ಗೋವಿಗಾಗಿ ಮೇವು ಚಿಕ್ಕ ಮಗಳೂರು ಉಸ್ತುವಾರಿ ನಾಗೇಂದ್ರ ಪುತ್ರನ್, ಜಿಲ್ಲಾ ಸಹಸಂಚಾಲಕ ವಿಕಾಸ್ ಶೆಟ್ಟಿ ಉಡುಪಿ, ಭರತ್ ಗಾಣಿಗ ಕೋಟ, ಆಶ್ರಮದ ಮುಖ್ಯಸ್ಥ ವಿನಯಚಂದ್ರ, ಗೋವಿಗಾಗಿ ಮೇವು ಸಂಘಟನೆಯ ಪ್ರಮೋದ್ ಕಾಂಚನ್ ಬಾರಿಕೆರೆ, ವಸಂತ್ ಸುವರ್ಣ ಮಣೂರು ಹಾಗೂ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com