ಮುಂಬೈ : ಟಿ20 ವಿಶ್ವಕಪ್ ಬಳಿಕ ರವಿಶಾಸ್ತ್ರಿ ಅವರ ಟೀಂ ಇಂಡಿಯಾ ಕೋಚ್ ಸ್ಥಾನದ ಅವಧಿ ಮುಗಿಯಲಿದೆ. ಹಾಗಾಗಿ ರವಿಶಾಸ್ತ್ರಿ ಬಳಿಕ ಮಾಜಿ ನಾಯಕ ಅನಿಲ್ ಕುಂಬ್ಲೆ ಟೀಂ ಇಂಡಿಯಾ ಮುಖ್ಯ ಕೋಚ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಟಿ20 ವಿಶ್ವಕಪ್ ಮುಗಿದ ಬಳಿಕ ರವಿಶಾಸ್ತ್ರಿ, ಬೌಲಿಂಗ್ ತರಬೇತುದಾರ ಭರತ್ ಅರುಣ್ ಮತ್ತು ಫೀಲ್ಡಿಂಗ್ ತರಬೇತುದಾರ ಆರ್.ಶ್ರೀಧರ್ ಅವರ ಅಧಿಕಾರಾವಧಿ ಕೊನೆಗೊಳ್ಳುತ್ತಿದೆ. ಬಿಸಿಸಿಐ ಮತ್ತೊಮ್ಮೆ ಮುಖ್ಯ ತರಬೇತುದಾರರನ್ನಾಗಿ ಅನಿಲ್ ಕುಂಬ್ಳೆ ಅವರನ್ನು ನೇಮಕ ಮಾಡಲು ನಿರ್ಧರಿಸಿದೆ
2016-17 ರಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಅವರು ನಾಯಕ ವಿರಾಟ್ ಕೊಹ್ಲಿ ಅವರ ಜೊತೆಗಿನ ಭಿನ್ನಾಭಿಪ್ರಾಯದಿಂದ ಕೋಚ್ ಹುದ್ದೆ ತೊರೆದಿದ್ದರು.
Advertisement. Scroll to continue reading.