ವರದಿ: ದಿನೇಶ್ ರಾಯಪ್ಪನಮಠ
ಕೋಟ: ರಾಷ್ಟ್ರೀಯ ಹೆದ್ದಾರಿ ಅಗಲಿಕರಣದಿಂದ ಇಚಿಗೆ ಹೆದ್ದಾರಿ ಅವಗಡಗಳು ಹೆಚ್ಚುತ್ತಿದೆ.ರಸ್ತೆಗಳ ಕೆಲ ಭಾಗದಲ್ಲಿ ಹೊಂಡಮಯ ಹಾಗೂ ಬದಿಯಂಚಿನ ಗುಂಡಿಗಳ ಬಗ್ಗೆ ಕೇಳುವರಿಲ್ಲದಾಗಿದೆ. ಹೀಗಿರುವಾಗ ಕೋಟದ ಜೀವರಕ್ಷಕ ಜೀವನ್ ಮಿತ್ರ ಆಂಬ್ಯುಲೇನ್ಸ್ ಸಂಚರಿಸುವ ಕೋಟ ಹಾಗೂ ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿ ಜೋಡಿಸುವ ಪಶು ಆಸ್ಪತ್ರೆ ಎದುರು ಸ್ಥಳದಲ್ಲಿ ಗುಂಡಿಗಳದ್ದೆ ರಾಶಿ, ವಾಹನ ಸಂಚರಿಸುವರಿಗೆ ಕಂಠಕವಾಗಿ ಪರಿಣಮಿಸಿದೆ.ಅಲ್ಲಿನ ಸ್ಥಳೀಯ ಸ್ಥಳೀಯಾಡಳಿತದ ಜನಪ್ರತಿನಿಧಿಗಳು ಫೆÇೀನ್ ಮೂಲಕ ನವಯುಗ ಕಂಪನಿಯ ಗಮನ ಸೆಳೆದರೂ ಪ್ರಯೋಜನ ಶೂನ್ಯವಾಗಿದೆ.ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ಪಡೆದ ಕಂಪನಿಯ ನಿರ್ಲಕ್ಷ್ಯಕ್ಕೆ ಜೀವನ್ ಮಿತ್ರ ಆಂಬ್ಯುಲೇನ್ಸ್ ಮಾಲಿಕ ಹಾಗೂ ಸ್ಥಳೀಯರು ಆಕ್ರೋಶ ಹೊರಹಾಕಿದ್ದು, ಬಾಳೆಗಿಡ ನೆಟ್ಟು ಪ್ರತಿಭಟಿಸಿದ್ದಾರೆ. ಶೀಘ್ರದಲ್ಲಿ ಈ ಗುಂಡಿಗಳಿಗೆ ಮುಕ್ತಗಾಣಿಸದಿದ್ದರೆ ಉಗ್ರಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಬಾರಿ ಗಾತ್ರದ ಗುಂಡಿಗೆ ಬಿದ್ದ ದಂಪತಿಗಳು :
ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ದಂಪತಿಗಳಿರ್ವರು ಕಳೆದ ವಾರ ಇದೇ ರಸ್ತೆ ಮುಖವಾಗಿ ಸಂಚರಿಸುವಾಗ ಎರಡು ವಾಹನಗಳ ವೇಗದಿಂದ ಈ ಬೈಕ್ ಸವಾರ ದಂಪತಿಗಳು ಇದೇ ಗುಂಡಿಯಲ್ಲಿ ಬಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ಕೂಡಾ ಸಂಭವಿಸಿದೆ .ಅಲ್ಲದೆ ಹಲವಾರು ವಾಹನಗಳು ಇಲ್ಲಿರಯವ ಗುಂಡಿಗೆ ಹಾರಿಸಿ ಗಾಯಗಳಾಗಿದ್ದು ಉಂಟು ಹೀಗೆ ಮುಂದುವರೆದರೆ ದೊಡ್ಡಮಟ್ಟದ ಅವಘಡ ತಪ್ಪಿದಲ್ಲ.
ಶೀಘ್ರ ಕ್ರಮಕ್ಕೆ ಆಗ್ರಹ :
ಇಲ್ಲಿರುವ ರಸ್ತೆ ಸಮೀಪವಿರುವ ಗುಂಡಿಗಳಿಗೆ ಶೀಘ್ರ ಮುಕ್ತಗಾಣಿಸಬೇಕು ವಾಹನ ಸಂಚರಿಸುವವರು ಯಾತನೆ ಅನುಭವಿಸುತ್ತಿದ್ದಾರೆ.ನಾನು ಕೂಡಾ ಆಂಯಂಬ್ಯುಲೇನ್ಸ್ ಮೂಲಕ ಇಲ್ಲಿಂದಲೇ ತೆರಳಬೇಕು ಎಮರ್ಜೆನ್ಸಿ ಸಂದರ್ಭದಲ್ಲಿ ತೆರಳಬೇಕಾದರೆ ಇಂಥಹ ಗುಂಡಿಗಳು ಸಮಸ್ಯೆ ನೀಡುತ್ತಿವೆ ನವಯುಗ ಕಂಪನಿ ಶೀಘ್ರದಲ್ಲೆ ಇದಕ್ಕೆ ಮುಕ್ತಿ ಹಾಡಲಿ ಇಲ್ಲವಾದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಇಳಿಯಬೇಕಾದಿತು ಎಂದು ಈ ಮೂಲಕ ಎಚ್ಚರಿಸುತ್ತಿದ್ದೇನೆ
ನಾಗರಾಜ್ ಪುತ್ರನ್ -ಜೀವನ್ ಮಿತ್ರ ಆಂಬ್ಯುಲೇನ್ಸ್ ಮಾಲಿಕ
Advertisement. Scroll to continue reading.