ಬೆಂಗಳೂರು : ಬಳ್ಳಾರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಲ್ಲಿ ಯುವತಿಗೆ ಕಿಸ್ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಮೂಲದ ಇಂಜಿನಿಯರ್ ಮಧುಸೂದನ್ ರೆಡ್ಡಿ(25)ಯನ್ನು ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಯುವಕ ಚಲಿಸುತ್ತಿದ್ದ ಬಸ್ಸಲ್ಲಿಯೇ ಯುವತಿಗೆ ಮುತ್ತುಕೊಟ್ಟು ಪರಾರಿಯಾಗಿದ್ದ. ಸಾರ್ವಜನಿಕವಾಗಿ ಮಾನಹಾನಿ ಮಾಡಿದ ಆರೋಪದಡಿ ಯುವತಿ ಬೆಂಗಳೂರಿನ ಪೀಣ್ಯ ಠಾಣೆಗೆ ಯುವಕನ ವಿರುದ್ಧ ದೂರು ದಾಖಲಿಸಿದ್ದಳು. ಇದೀಗ ಪೊಲೀಸರು ಪ್ರಕರಣ ಸಂಬಂಧ ಯುವಕನನ್ನು ಬಂಧಿಸಿದ್ದಾರೆ.
Advertisement. Scroll to continue reading.