ಮುಡಿಪು : ಸೆಲ್ಕೋ ಸೇವಾ ಸಪ್ತಾಹದ ಅಂಗವಾಗಿ ಸೆಲ್ಕೋ ಸೋಲಾರ್ ಸೇವಾ ಶಿಬಿರ
Published
0
ಮುಡಿಪು : ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿ. ಬೆಂಗಳೂರು ವತಿಯಿಂದ ಸೆಲ್ಕೋ ಸೇವಾ ಸಪ್ತಾಹದ ಅಂಗವಾಗಿ ಸೆಲ್ಕೋ ಸೋಲಾರ್ ಸೇವಾ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಪ್ರಾರ್ಥಮಿಕ ಆರೋಗ್ಯ ಕೇಂದ್ರ ಕುರ್ನಾಡುವಿನ ವೈದ್ಯೆ ರೀಮಾ ಉದ್ಘಾಟಿಸಿದರು.
ಈ ಸಂದರ್ಭ ಮಾಜಿ ಒಂಬುಡ್ಸ್ಮೆನ್ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನಾ ಶೆಟ್ಟಿ, ಲಯನ್ಸ್ ಮುಡಿಪು ಪೂರ್ವಧ್ಯಕ್ಷ ಜಯರಾಮ ಸಾಂತ, ಅಧ್ಯಕ್ಷರು ಗ್ರಾಮ ಪಂಚಾಯಿತಿ ಕುರ್ನಾಡು ಗಣೇಶ್ ನಾಯಕ್, ಗ್ರಾಮ ಪಂ. ಕುರ್ನಾಡುವಿನ ಪಿಡಿಒ ಕೇಶವ, ಕುರ್ನಾಡು ತಾಲೂಕು ಪಂಚಾಯತ್ ಸದಸ್ಯ ನವೀನ್ ಪಾದಲ್ಪಾಡಿ, SKDRDP ಮುಡಿಪ ವಲಯದ ಮೇಲ್ವಿಚಾರಕ ಗಂಗಾಧರ್, ಮೆಟೀರಿಯಲ್ ಲ್ಯಾಬ್ ಸೆಲ್ಕೋ ನ ಸೀನಿಯರ್ ಮೆನೇಜರ್ ವಸಂತ್, ಪುತ್ತೂರು ಸರ್ವಿಸ್ ಬ್ರಾಂಚ್ ಸೆಲ್ಕೋ ವ್ಯವಸ್ಥಾಪಕ ಲಕ್ಷ್ಮಣ್, ಮುಡಿಪು ಯೋಗ ಗುರು ಪ್ರದೀಪ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.