ವರದಿ : ದಿನೇಶ್ ರಾಯಪ್ಪನಮಠ
ಕೋಟ: ಉಡುಪಿ ಜಿಲ್ಲಾ ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಪೂರ್ವಭಾವಿ ಸಭೆ ಶನಿವಾರ ಬ್ರಹ್ಮಾವರ ರೋಟರಿ ಭವನದಲ್ಲಿ ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಶೋಕ್ ಕುಮಾರ್ ಶೆಟ್ಟಿ ಮಟಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಅನುದಾನಿತ ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಬಳಿಕ
ಜಿಲ್ಲಾ ಹಾಗೂ ತಾಲ್ಲೂಕುವಾರು ಅಧ್ಯಕ್ಷರುಗಳನ್ನು ನೇಮಿಸಲಾಯಿತು. ಜಿಲ್ಲಾ ಅಧ್ಯಕ್ಷರಾಗಿ ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಶೋಕ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ಕೋಡಿ ಹಾಜಿ ಮೈದಿನ್ ಅನುದಾನಿತ ಪ್ರೌಢಶಾಲೆಯ ಜಯಶೀಲ ಶೆಟ್ಟಿ ಕಂದಾವರ, ಕಾರ್ಯದರ್ಶಿಯಾಗಿ ಅಂಪಾರು ಸಂಜಯ್ ಗಾಂಧಿ ಪ್ರೌಢಶಾಲೆಯ ಉದಯಕುಮಾರ್ ಬಿ.ಅಂಪಾರು ಆಯ್ಕೆಯಾದರು.
ಇದೇ ಸಂದರ್ಭದಲ್ಲಿ ಬೈಂದೂರು ತಾಲೂಕು ಅಧ್ಯಕ್ಷ ಆನಂದ ಮದ್ದೋಡಿ, ಕುಂದಾಪುರ ತಾಲೂಕು ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ ಬಸ್ರೂರು, ಬ್ರಹ್ಮಾವರ ತಾಲೂಕು ಅಧ್ಯಕ್ಷ ಗಣೇಶ್, ಕಾರ್ಕಳ ತಾಲೂಕು ಅಧ್ಯಕ್ಷ ಪ್ರಕಾಶ್ ರಾವ್ ಇನ್ನಾ, ಉಡುಪಿ ತಾಲೂಕು ಅಧ್ಯಕ್ಷ ಕಿರಣ್ ಶೆಟ್ಟಿ ಇವರನ್ನು ಆಯ್ಕೆ ಮಾಡಲಾಯಿತು. ಅಶೋಕ್ ಕುಮಾರ್ ಶೆಟ್ಟಿ ಮಟಪಾಡಿ ಸ್ವಾಗತಿಸಿದರು. ಉದಯಕುಮಾರ್.ಬಿ.ಅಂಪಾರು ವಂದಿಸಿದರು.
Advertisement. Scroll to continue reading.