ರಾಷ್ಟ್ರೀಯ

ಮೂರು ಲೋಕಸಭಾ, 30 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಪ್ರಕಟ

0

ನವದೆಹಲಿ : ದೇಶದ ಮೂರು ಲೋಕಸಭಾ ಸ್ಥಾನಗಳಿಗೆ ಮತ್ತು ವಿವಿಧ ರಾಜ್ಯಗಳಲ್ಲಿನ 30 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣೆ ಆಯೋಗವು ದಿನಾಂಕ ಘೋಷಿಸಿದೆ. 3 ಲೋಕಸಭೆ ಮತ್ತು ವಿವಿಧ ರಾಜ್ಯಗಳ 30 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಅಕ್ಟೋಬರ್ 30 ರಂದು ನಡೆಯಲಿದ್ದು, ನವೆಂಬರ್ 2 ರಂದು ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದೆ.

ಮೂರು ಸಂಸತ್ ಕ್ಷೇತ್ರಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಈ ಉಪಚುನಾವಣೆ ನಡೆಯುತ್ತಿದ್ದು, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶ ಮತ್ತು ವಿವಿಧ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಲ್ಲಿ 30 ಸೀಟುಗಳು ಖಾಲಿ ಇವೆ ಎಂದು ಚುನಾವಣಾ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.

ಆಂಧ್ರ ಪ್ರದೇಶದ ಒಂದು ವಿಧಾನಸಭಾ ಕ್ಷೇತ್ರ, ಅಸ್ಸಾಂನ ಐದು, ಬಿಹಾರದ ಎರಡು ಕ್ಷೇತ್ರ, ಹರಿಯಾಣ ಒಂದು, ಹಿಮಾಚಲಪ್ರದೇಶದ ಮೂರು, ಕರ್ನಾಟಕದ ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರ, ಮಧ್ಯಪ್ರದೇಶದ ಮೂರು, ಮಹಾರಾಷ್ಟ್ರದ ಒಂದು ಮೇಘಾಲಯದ ಮೂರು, ಮಿಜೋರಾಂ ಒಂದು, ನಾಗಲ್ಯಾಂಡ್ ನ ಒಂದು, ರಾಜಸ್ಥಾನದ ಎರಡು, ತೆಲಂಗಾಣ ಒಂದು, ಪಶ್ಚಿಮ ಬಂಗಾಳದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com