ಬ್ರಹ್ಮಾವರ : ಕಡಂದಲೆ ಸುರೇಶ್ ಭಂಡಾರಿ ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕಡಂದಲೆ ಸುರೇಶ್ ಭಂಡಾರಿ ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್, ಪ್ರಸಾದ್ ನೇತ್ರಾಲಯ ಉಡುಪಿ ಇವರ ಸಹಭಾಗಿತ್ವದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಮಂಗಳವಾರ ಬಾರಕೂರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉಡುಪಿ ಶಾಸಕ ರಘುಪತಿ ಭಟ್ ಉದ್ಗಾಟಿಸಿ ಮಾತನಾಡಿ, ಪ್ರತಿಯೊಂದು ಸಮಾಜದಲ್ಲಿ ಹಣವಂತರು ಇರುತ್ತಾರೆ ಆದರೆ ಹಣದ ಸದ್ವಿನಿಯೋಗ ಮಾಡುವವರು ತೀರಾ ವಿರಳ. ಕಡಂದಲೆ ಸುರೇಶ್ ಭಂಡಾರಿಯವರು ಅವರ ಟ್ರಸ್ಟ್ ವತಿಯಿಂದ ಮನುಷ್ಯನ ಅತೀ ಅಗತ್ಯತೆಯ ಕಣ್ಣಿನ ಚಿಕಿತ್ಸಾ ಶಿಬಿರವನ್ನು ಮಾಡಿ ಮಾದರಿಯಾಗಿದ್ದಾರೆ. ಎಲ್ಲಾ ಭಾಗದಲ್ಲಿ ಇಂತಹ ಕಾರ್ಯಕ್ರಮವಾಗಬೇಕು ಎಂದರು.
ಈ ಸಂದರ್ಭ ಕುಯಿಲಾಡಿ ಸುರೇಶ್ ನಾಯಕ್, ಶಂಭು ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಯಶ್ ಪಾಲ್ ಸುವರ್ಣ, ಬಾರಕೂರು ಶಾಂತಾರಾಮ ಶೆಟ್ಟಿ, ಸದಾಶಿವ ಭಂಡಾರಿ ಸಕಲೇಶ್ಪುರ, ಸವೀತಾ ಹರೀಶ್ ರಾಮ್ ಭಂಡಾರಿ, ಕಡಂದಲೆ ಸುರೇಶ್ ಭಂಡಾರಿ, ಶೋಭಾ ಸುರೇಶ್ ಭಂಡಾರಿ, ಸೌರಭ್ ಭಂಡಾರಿ ಇನ್ನಿತರರು ಉಪಸ್ಥಿತರಿದ್ದರು.