ಎಳ್ಳಾರೆ : ಯೂಥ್ ಫಾರ್ ಸೇವಾ, ಉಡುಪಿ ಇವರ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಕಡ್ತಲ, ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಎಳ್ಳಾರೆ ಇವರ ಸಹಕಾರದೊಂದಿಗೆ ಸೇವಾ ಸಿಂಧು ಇವರ ಸಂಯೋಜನೆಯಲ್ಲಿ ಎಲ್ಲಾ ವರ್ಗದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಇ-ಶ್ರಮ ಯೋಜನೆ ಅಸಂಘಟಿತ ಕಾರ್ಮಿಕ ಕಾರ್ಡ್ ನೋಂದಣಿ ಕಾರ್ಯಕ್ರಮವು ಎಳ್ಳಾರೆ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದಲ್ಲಿ ನಡೆಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕರಾದ ಬೈಲಂಗಡಿ ಜಯರಾಮ್ ನಾಯಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭ ಯೂಥ್ ಫಾರ್ ಸೇವಾ ಉಡುಪಿ ಸೇವಕಿ ರಮಿತಾ ಶೈಲೇಂದ್ರಾ ರಾವ್ ಮಾತನಾಡಿ, ಅಲ್ಲಲ್ಲಿ ಯುವಜನತೆ ಒಟ್ಟಾಗಿ ಸೇವೆ ಎಂಬ ಯಜ್ಞದಲ್ಲಿ ದುಡಿಯುವಂತ ಯುವ ಮನಸ್ಸನ್ನು ದೃಢವಾಗಿ ಸಬೇಕು ಎಂದರು. ಕಾರ್ಯಕ್ರಮದಲ್ಲಿ ದೇವಳದ ಪ್ರಧಾನ ಅರ್ಚಕ ಪುಟ್ಟಣ್ಣ ಅಡಿಗ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವ ಪೂಜಾರಿ, ಕಡ್ತಲ ಗ್ರಾ.ಪಂ ನಿಕಟ ಪೂರ್ವ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ, ಗ್ರಾ.ಪಂ ಸದಸ್ಯರಾದ ದೇವೇಂದ್ರ ಕಾಮತ್ ಎಳ್ಳಾರೆ, ದೀಪಾ ಡಿ.ಕಿಣಿ ಉಪಸ್ಥಿತರಿದ್ದರು.
ದೇವೇಂದ್ರ ಕಾಮತ್ ಸ್ವಾಗತಿಸಿ, ಸಂತೋಷ್ ಮಡಿವಾಳ ವಂದಿಸಿದರು. ದೀಪಕ್ ಕಾಮತ್ ಎಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
Advertisement. Scroll to continue reading.