ಕರಾವಳಿ

ಹೆಬ್ರಿ : ಚಾರ ಗ್ರಾಮದ ಬೂತ್ ಅಧ್ಯಕ್ಷರ ನಾಮಫಲಕ ಅನಾವರಣ ಕಾರ್ಯಕ್ರಮ

0

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾರವರ ಆಶಯದಂತೆ ಚಾರ ಗ್ರಾಮದ ಬೂತ್ ಅಧ್ಯಕ್ಷರ ನಾಮಫಲಕ ಅನಾವರಣ ಕಾರ್ಯಕ್ರಮ ಚಾರ ಪಂಚಾಯತ್ ವ್ಯಾಪ್ತಿಯ ಕೊಂಡೆಜಡ್ಡು ವಾರ್ಡನ ಕರಿಯ ನಾಯ್ಕ್, ವಂಡಾರಬೆಟ್ಟು ವಾರ್ಡ್ ನ ರಾಜೇಶ್ ಪೂಜಾರಿ, ಮಂಡಾಡಿಜಡ್ಡು ವಾರ್ಡ್ ನ ಭುಜಂಗ ಶೆಟ್ಟಿ, ಗಾಂಧಿನಗರ ವಾರ್ಡ್ ನ ಕೃಷ್ಣ ನಾಯ್ಕ್ ಇವರ ಮನೆಯಲ್ಲಿ ನಡೆಯಿತು. ಕಾರ್ಕಳ ಕ್ಷೇತ್ರಾಧ್ಷಕ್ಷರಾದ ಮಹಾವೀರ ಹೆಗ್ಗಡೆ, ಪ್ರಧಾನ ಕಾರ್ಯದರ್ಶಿ ಜಯರಾಂ ಸಾಲಿಯಾನ್, ಪಕ್ಷದ ಪ್ರಮುಖರಾದ ಗುರುದಾಸ್ ಶೆಣೈ ಭಾಗವಹಿಸಿ ಬೂತ್ ಅಧ್ಯಕ್ಷರ ಕಾರ್ಯ ಮತ್ತು ವ್ಯಾಪ್ತಿಯನ್ನು ತಿಳಿಸಿದರು.

ಹೆಬ್ರಿ ಶಕ್ತಿಕೇಂದ್ರದ ಅಧ್ಯಕ್ಷರಾದ ರಮೇಶ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಹರೀಶ್, ಗ್ರಾಮ ಸಮಿತಿಯ ಅಧ್ಯಕ್ಷರಾದ ಸೀತರಾಮ ಗಾಣಿಗ, ಪ್ರಧಾನ ಕಾರ್ಯದರ್ಶಿ ಸುನೀಲ್ ಪೂಜಾರಿ ,ಗ್ರಾಮ ಪಂಚಾಯತ್ ಅಧ್ಯಕ್ಷೆ ಕಸುಮ ಪ್ರಭು, ಸರ್ವ ಸದಸ್ಯರು,ಎಪಿಎಂಸಿ ಸದಸ್ಯರಾದ ಸಂಜೀವ ನಾಯ್ಕ್ ಹಿಂದುಳಿದ ಮೋರ್ಚಾ,ಯುವಮೋರ್ಚಾ ಅಧ್ಯಕ್ಷರು ಪದಾಧಿಕಾರಿಗಳು, ಪಕ್ಷದ ಪ್ರಮುಖರಾದ ಸುಧಾಕರ ಹೆಗ್ಡೆ,ಸಿ.ಎಂ ಪ್ರಸನ್ನ ಶೆಟ್ಟಿ, ಸುರೇಶ್ ಪೂಜಾರಿ, ಕಾರ್ತಿಕ್ ಮೊಯ್ಲಿ, ಗಣೇಶ್ ಪ್ರಭು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮತ್ತಿತರರು ಪಾಲ್ಗೊಂಡಿದ್ದರು.

ಯುವ ಮೋರ್ಚಾ ಹೆಬ್ರಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com