ವರದಿ : ದಿನೇಶ್ ರಾಯಪ್ಪನಮಠ
ಉಡುಪಿ : ಪೆರ್ಡೂರು ವಲಯದ ಕುಕ್ಕೆಹಳ್ಳಿ ಕಾರ್ಯಕ್ಷೇತ್ರದಲ್ಲಿ ನಡೆಯಲು ಸಾಧ್ಯವಾಗದೇ ಇರುವ ಫಲಾನುಭವಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ವೀಲ್ ಚೇರ್ ನ್ನು ಉಡುಪಿ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಸಮಿತಿ ಅಧ್ಯಕ್ಷರಾದ ಶಮಿತಾ ಪಿ ಶೆಟ್ಟಿಯವರು ವಿತರಿಸಿದರು.
ಪೆರ್ಡೂರು ವಲಯದ ಮೇಲ್ವಿಚಾರಕರಾದ ಸುಧೀರ್ ಹಂಗಳೂರು ಮಾತನಾಡಿ, ವಲಯದಲ್ಲಿ ಒಟ್ಟು 24 ಸದಸ್ಯರಿಗೆ ಒಟ್ಟು 2,35,000 ರೂಪಾಯಿ ಮೌಲ್ಯದ ವಸ್ತುಗಳನ್ನು ವಲಯದಲ್ಲಿ ವಿತರಿಸಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಹೇಮಲತಾ ಮತ್ತು ಗ್ರಾಮ ಪಂಚಾಯತ್ ಸದಸ್ಯ,ರು ಒಕ್ಕೂಟದ ಪಧಾಕಾರಿಗಳು ಮಾಜಿ ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಿರ್ಮಾಲಾ ಸ್ವಾಗತಿಸಿದರು. ಅಶೋಕ್ ವಂದಿಸಿದರು. ಪ್ರತಿಮಾ ನಿರೂಪಿಸಿದರು.
Advertisement. Scroll to continue reading.