ಚಿಕ್ಕಮಗಳೂರು : ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಪೀಠವೇ ಬೇರೆ, ನಾಗೇನಹಳ್ಳಿಯಲ್ಲಿರುವ ಬಾಬಾಬುಡನ್ ದರ್ಗಾವೇ ಬೇರೆ, ಇನಾಂ ದತ್ತಪೀಠದಲ್ಲಿ ಅನಗತ್ಯವಾಗಿ ನಿರ್ಮಾಣ ಮಾಡಿರುವ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರ ಮಾಡಬೇಕು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುನೀಲ್ ಕುಮಾರ್, ದತ್ತಪೀಠದಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ಮಾಡಿಕೊಡಬೇಕು. ದತ್ತಾತ್ರೇಯ ಪೀಠವೇ ಬೇರೆ, ನಾಗೇನಹಳ್ಳಿಯಲ್ಲಿರುವ ಬಾಬಾಬುಡನ್ ದರ್ಗಾವೇ ಬೇರೆ. ಈ ವಿಚಾರ ದಾಖಲೆಗಳಲ್ಲಿ ಮತ್ತೆ ಮತ್ತೆ ಸಾಭೀತಾಗಿದೆ ಎಂದು ಹೇಳಿದ್ದಾರೆ.
ಅನಗತ್ಯವಾಗಿ ನಿರ್ಮಾಣಗೊಂಡಿರುವ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರ ಮಾಡುವ ಮೂಲಕ ನಿಮ್ಮ ನಾಗೇನಹಳ್ಳಿಯ ದರ್ಗಾವನ್ನು ನೀವು ಅಭಿವೃದ್ಧಿ ಮಾಡಿ. ಇಲ್ಲಿ ಹಿಂದೂಗಳಿಗೆ ಮುಕ್ತವಾಗಿ ಪೂಜೆ ಮಾಡಲು ಅವಕಾಶವನ್ನು ಕೊಡಬೇಕು ಎಂದು ಹೇಳಿದ್ದಾರೆ.
Advertisement. Scroll to continue reading.