ರಮಾನಂದ್ ಸಾಗರ್ ರ ಪ್ರಸಿದ್ಧ ಪೌರಾಣಿಕ ಧಾರವಾಹಿಯ ‘ರಾಮಾಯಣ’ದಲ್ಲಿ ರಾವಣನ ಪಾತ್ರ ವಹಿಸಿದ್ದ ಹಿರಿಯ ನಟ ಅರವಿಂದ ತ್ರಿವೇದಿ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
82 ವರ್ಷದ ಹಿರಿಯ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹೃದಯಾಘಾತ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ರಾಮಾಯಣ, ವಿಕ್ರಮ್ ಔರ್ ಬೇತಾಲ್ ನಲ್ಲಿ ಮಹತ್ವದ ಪಾತ್ರವನ್ನೂ ಅವರು ನಿರ್ವಹಿಸಿದ್ದಾರೆ. ಅವರು ಹಿಂದಿ ಮತ್ತು ಗುಜರಾತಿ ಸೇರಿದಂತೆ 300 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಇದರಲ್ಲಿ ಸಾಮಾಜಿಕ ಮತ್ತು ಪೌರಾಣಿಕ ಪ್ರಕಾರಗಳು ಸೇರಿವೆ.
ಅರವಿಂದ್ ಅವರ ನಿಧನಕ್ಕೆ ರಾಮಾಯಣ ಧಾರಾವಾಹಿಯಲ್ಲಿ ನಟಿಸಿದ್ದ ಕಲಾವಿದರು, ಗಣ್ಯರು ಸಂತಾಪ ಸೂಚಿಸಿದ್ದಾರೆ.
Advertisement. Scroll to continue reading.