ಕೋಟ: ಪುರಾಣಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಸಂತಾನ ಭಾಗ್ಯ ಕರುಣಿಸುವ ಹಲವು ಮಕ್ಕಳ ತಾಯಿ ಕೋಟ ಅಮೃತೇಶ್ವರಿ ದೇವಳದಲ್ಲಿ ಮೊದಲ ದಿನದ ಶರನ್ನವರಾತ್ರಿ ಪೂಜಾ ಕಾರ್ಯಕ್ರಮಗಳು ನೆರವೇರಿದವು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಎಂ.ಸುಬ್ರಾಯ ಆರ್ಚಾ ಹಾಗೂ ಕಾರ್ಕಳದ ಉದ್ಯಮಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮೊದಲ ದಿನದ ಸೇವಾರೂಪದಲ್ಲಿ ಚಂಡಿಕಾಸಪ್ತಸತಿ ಪಾರಾಯಣ,ದುರ್ಗಾಯಾಗ ಕಾರ್ಯಕ್ರಮಗಳು ವೇ.ಮೂ.ಮಧುಸೂದನ ಬಾಯರಿ ನೇತೃತ್ವದಲ್ಲಿ ಜರಗಿದವು.ಈ ಸಂದರ್ಭದಲ್ಲಿ ದೇವಳದ ವತಿಯಿಂದ ಸೇವಾಕರ್ತರನ್ನು ಗೌರವಿಸಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ ಕುಂದರ್ ,ಸದಸ್ಯರಾದ ಚಂದ್ರ ಪೂಜಾರಿ,ಸುಶೀಲಸೋಮಶೇಖರ್,ಜ್ಯೋತಿ ಬಿ ಶೆಟ್ಟಿ, ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ,ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಚಂದ್ರ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಮಾಜಿ ಸದಸ್ಯ ಭುಜಂಗ ಗುರಿಕಾರ್, ಮತ್ತಿತರರು ಉಪಸ್ಥಿತರಿದ್ದರು.