ವರದಿ : ಶ್ರೀದತ್ತ ಹೆಬ್ರಿ
.
ಹೆಬ್ರಿಯ ಗಿಲ್ಲಾಳಿ ಯಲ್ಲಿ ನೂತನವಾಗಿ ಶ್ರೀವಿಶ್ವೇಶ ಕೃಷ್ಣ ಗೋ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಿರ್ಮಾಣವಾಗಲಿರುವ ಶ್ರೀ ವಿಶ್ವೇಶ ಕೃಷ್ಣ ಗೋಶಾಲೆಯ ಶಿಲಾನ್ಯಾಸ ಸಮಾರಂಭ ಶುಕ್ರವಾರ ನಡೆಯಿತು.
ಉಡುಪಿ ಪೇಜಾವರ ಮಠದ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ, ಆಶೀರ್ವದಿಸಿದರು. ಸಭಾಧ್ಯಕ್ಷತೆಯನ್ನು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನಿಲ್ ಕುಮಾರ್ ವಹಿಸಿದ್ದರು. ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ , ಶಾಸಕ ಕೆ. ರಘುಪತಿ ಭಟ್, ಸೆಲ್ಕೋ ಡೆಪ್ಯುಟಿ ಜನರಲ್ ಮ್ಯಾನೇಜರ್ ಗುರುಪ್ರಸಾದ್ ಶೆಟ್ಟಿ, ಶ್ರೀವಿಶ್ವೇಶ ಕೃಷ್ಣ ಗೋ ಸೇವಾ ಟ್ರಸ್ಟ್ ನ ಟ್ರಸ್ಟಿಗಳು ಮೊದಲಾದವರು ಉಪಸ್ಥಿತರಿದ್ದರು.
Advertisement. Scroll to continue reading.