ಬೆಳ್ತಂಗಡಿ : ಪ್ರತಿ ವರ್ಷದಂತೆ ಈ ವರ್ಷವೂ ಸವಣಾಲು ಗ್ರಾಮದ ಕಾಳಿಬೆಟ್ಟ ಶ್ರೀದುರ್ಗಾಕಾಳಿಕಾಂಬ ಕ್ಷೇತ್ರದಲ್ಲಿ ಪ್ರಸಕ್ತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನವರಾತ್ರಿ ಉತ್ಸವವು ಪ್ರಾರಂಭಗೊಂಡಿದ್ದು, ಇಂದು ಆರನೇ ದಿನದ ಚಂಡಿಕಾಹೋಮ ನೆರವೇರಿತು. ಪ್ರತಿದಿನ ಚಂಡಿಕಾಹೋಮ ಹಾಗೂ ಅನ್ನಸಂತರ್ಪಣೆ ಇರುವುದು. ಅ.13 ಬುಧವಾರದಂದು ಕಾಳಿಗುಡಿಯಲ್ಲಿ ಬೆಳಗ್ಗೆ 09:00 ಗಂಟೆಗೆ ಪೂಜೆ, ಮಧ್ಯಾಹ್ನ ವಿಶೇಷ ಪೂಜೆ, ಅನ್ನಸಂತರ್ಪಣೆ ಹಾಗೂ ರಾತ್ರಿ ಹೂವಿನ ಪೂಜೆ, ರಂಗ ಪೂಜೆ, ವಾಹನ ಪೂಜೆ ಜರಗಲಿರುವುದು.
ಅ. 14 ಗುರುವಾರದಂದು ಸಂಜೆ 05:00 ಗಂಟೆಯಿಂದ ವಾಹನ ಪೂಜೆ, ಶ್ರೀ ಮೂಲದುರ್ಗಾ ದೇವಿಗೆ ರಾತ್ರಿ ಹೂವಿನ ಪೂಜೆ, ರಂಗ ಪೂಜೆ ನಡೆಯಲಿದೆ.
ಅ.15 ರಂದು ಶುಕ್ರವಾರ ಸಾರ್ವಜನಿಕ ಚಂಡಿಕಾಹೋಮ ಹಾಗೂ ಅನ್ನಸಂತರ್ಪಣೆ ನಡೆಯಲಿರುವುದು.
Advertisement. Scroll to continue reading.
ಶ್ರೀ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮುಖಗವಸನ್ನು ಧರಿಸಿ, ಭಾಗವಹಿಸಿ, ಶ್ರೀ ದುರ್ಗಾಕಾಳಿಕಾಂಬ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನದ ಸಂಸ್ಥಾಪಕರು, ಆಡಳಿತ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.