ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ವಿಠಲವಾಡಿ ಫ್ರೆಂಡ್ಸ್ ಕುಂದಾಪುರ ಇವರ ಆಶ್ರಯದಲ್ಲಿ ತೆನೆ ಪರ್ವ 2021 ನೂತನ ಫಸಲಿನ ಆಗಮನದ ಸಂಭ್ರಮ 23ನೇ ವರ್ಷದ ಹೊಸ್ತಿನ ಪ್ರಯುಕ್ತ ಮಕ್ಕಳಿಗಾಗಿ ಅಭ್ಯಾಸ ವರ್ಗ, ಕೊರೋನ ಜಾಗೃತಿಯ ಬಗ್ಗೆ ವೈದ್ಯರಿಂದ ಸಲಹೆ, ಸ್ಮಾರ್ಟ್ ಕ್ವಿಜ್ (ಮಹಾಭಾರತ ಮತ್ತು ರಾಮಾಯಣದ ಬಗ್ಗೆ) ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಂದಾಪುರ ಪುರಸಭಾ ಸದಸ್ಯ ಗಿರೀಶ್, ಹೊಸ್ತಿನ ಹಬ್ಬವನ್ನು ಇಷ್ಟೊಂದು ವಿಜೃಂಭಣೆಯಿಂದ ನಡೆಸುತ್ತಿರುವುದು ಇಲ್ಲಿಯೇ. ಈ ರೀತಿ ಮಾಡುವುದರಿಂದ ಹಿಂದೂ ಸಂಸ್ಕೃತಿ ಉಳಿಯುತ್ತದೆ ಎಂದರು
Advertisement. Scroll to continue reading.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಿಜಯಕುಮಾರ್, ಗೌರವಾಧ್ಯಕ್ಷ ಸುರೇಶ್ ವಿಠಲವಾಡಿ ಉಪಸ್ಥಿತರಿದ್ದರು.
ತೆನೆ ಪರ್ವ ಕಾರ್ಯಕ್ರಮದ ಅಂಗವಾಗಿ ಸಂತೆಕಟ್ಟೆಯ ಕೃಷ್ಣಾನುಗ್ರಹ ಮಮತೆಯ ತೊಟ್ಟಿಲು ಇಲ್ಲಿ ಸಹಭೋಜನ ಹೊಸ್ತಿನ ಊಟ ಕಾರ್ಯಕ್ರಮವನ್ನು ಕೋಡಿ ರಾಮ ಪೂಜಾರಿ ಇವರ ಕುಟುಂಬಸ್ಥರ ವಿಠಲವಾಡಿ ಸಹಕಾರದಿಂದ ನೀಡಲಾಯಿತು.
ಮಹಿಳೆಯರು ಮತ್ತು ಮಕ್ಕಳಿಗೆ ಹಾಗೂ ಪುರುಷರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಸಂಜೆ ಬಹುಮಾನ ವಿತರಣೆಯ ಮೂಲಕ ಸಮಾರೋಪ ಸಮಾರಂಭ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿಠಲವಾಡಿ ಫ್ರೆಂಡ್ಸ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು
ಪ್ರಕಾಶ್ ಹಾಗೂ ನಿತಿನ್ ಕಾರ್ಯಕ್ರಮ ನಿರೂಪಣೆ ಮಾಡಿ, ಶರತ್ ವಂದಿಸಿದರು.