ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಶಂಕರನಾರಾಯಣ ವಲಯದ ಹೆಂಗವಳ್ಳಿ ಗ್ರಾಮ ದೊಡ್ಡಬೆಳಾರು ಪ್ರದೇಶದಲ್ಲಿ ಹೆಣ್ಣು ಕಾಡುಕೋಣ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಬಂಧಿಸಲಾಗಿದೆ. ಕಂಡ್ಲೂರಿನ ಗವಂಜಿ ಶಾಹಿದ್ ಬಿನ್ ಗವಂಜಿ ಮಹಮ್ಮದ್(31) ಬಂಧಿತ. ಬಂಧಿತನನ್ನು ಈಗಾಗಲೇ ವಿಚಾರಣೆ ನಡೆಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಸ್ ರೆಡ್ಡಿ ಎಂ. ವಿ. ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಇವರ ಮಾರ್ಗದರ್ಶನದಲ್ಲಿ ನಡೆಸಿದ್ದು, ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಚಿದಾನಂದ, ಉಪ ವಲಯ ಅರಣ್ಯಾಧಿಕಾರಿಗಳಾದ ಕೀರ್ತನ್ ಶೆಟ್ಟಿ, ಮಂಜುನಾಥ ನಾಯಕ್, ಅಭಿನಂದನ್ ಹೆಗಡೆ ಅರಣ್ಯ ರಕ್ಷಕರಾದ ರವಿ, ಪ್ರಶಾಂತ್, ರವೀಂದ್ರ ಅರಣ್ಯ ವೀಕ್ಷಕರಾದ ಶಿವಣ್ಣ ಆರ್. ವೇಷಗಾರ್, ಚಂದ್ರು ಎರೇಶಿಮೆ ಮತ್ತು ವಾಹನ ಚಾಲಕರಾದ ರವಿ ಭಾಗಿಯಾಗಿದ್ದರು.
Advertisement. Scroll to continue reading.
ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತನಿಖೆ ಮುಂದುವರೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.