ಬಾರ್ಕೂರು ಶ್ರೀಸಿಂಹವಾಹಿನಿ ಬನ್ನಿ ಮಹಾಕಾಳಿ ದೇವಸ್ಥಾನದಲ್ಲಿ ಶ್ರೀಚಕ್ರ ವಿಶೇಷ ಆರಾಧನೆ
Published
0
ಬ್ರಹ್ಮಾವರ : ಇತಿಹಾಸ ಪ್ರಸಿದ್ಧ ಬಾರಕೂರಿನ ಪ್ರಾಚೀನ ದೇವಾಲಯ ಹಾಗೂ ಪ್ರಧಾನ ದೇವಾಲಯ ಆದ ಶ್ರೀಸಿಂಹವಾಹಿನಿ ಬನ್ನಿಮಹಾಕಾಳಿ ದೇವಸ್ಥಾನದಲ್ಲಿ”ಶ್ರೀಚಕ್ರ” ವಿಶೇಷ ಆರಾಧನೆ ನಡೆಯಿತು. ಶ್ರೀಚಕ್ರ ವಿಶೇಷ ಆರಾಧನೆ ಮಾಡುವ ಏಕೈಕ ದೇವಸ್ಥಾನ ಇದಾಗಿದ್ದು, ನವರಾತ್ರಿಯ ಸಂದರ್ಭದಲ್ಲಿ ಮಧ್ಯಾಹ್ನ ನಡೆದ ಪೂಜೆಯ ಸಂದರ್ಭದಲ್ಲಿ ಸೂರ್ಯ ರಶ್ಮಿಯ ಸಮಾಗಮ, ಎಲ್ಲರ ಗಮನ ಸೆಳೆಯುತ್ತದೆ.
ಶ್ರೀಸಿಂಹವಾಹಿನಿ ಬನ್ನಿಮಹಾಕಾಳಿದೇವಸ್ಥಾನ ಸಿಂಹಾಸನಗುಡ್ಡೆ ಬಾರ್ಕೂರು ಇತಿಹಾಸ ಪ್ರಸಿದ್ಧ ಬಾರಕೂರಿನ ಪ್ರಾಚೀನ ದೇವಾಲಯ ಹಾಗೂ ಪ್ರಧಾನ ದೇವಾಲಯವೂದ ಆದ ಶ್ರೀಸಿಂಹವಾಹಿನಿ ಬನ್ನಿಮಹಾಕಾಳಿ ದೇವಸ್ಥಾನದಲ್ಲಿ, ನವರಾತ್ರಿ ಯಂದು. “ಶ್ರೀಚಕ್ರ ವಿಶೇಷ ಆರಾಧನೆ ನಡೆಯುವಏಕೈಕ ದೇವಸನ್ನಿಧಿ.” ಶ್ರೀಸಿಂಹವಾಹಿನಿ ಬನ್ನಿಮಹಾಕಾಳಿ ದೇವಸ್ಥಾನ ಇದಾಗಿದೆ,
“ಶ್ರೀ ಕ್ಷೇತ್ರದಲ್ಲಿ ಶ್ರೀಚಕ್ರ ಆರಾಧನೆಯ ಮಹತ್ವ”: ತುಳುನಾಡಿನಲ್ಲಿ ಅಳಿಯ ಸಂತಾನದ ಪ್ರವರ್ತಕನಾದ ಭೂತಾಳಪಾಂಡ್ಯನು ರಾಜ್ಯಭಾರ ಮಾಡಲು ಶಿವಗಣನಾದ ಕುಂಡೋದರನು, ವಿಕ್ರಮಾದಿತ್ಯನು ಆಳಿದ ಧರ್ಮ ಸಿಂಹಾಸನವನ್ನು ತಂದುಕೊಡುತ್ತಾನೆ. ಆತನು ಅದರ ಮೇಲೆ ಕುಳಿತು ರಾಜ್ಯಭಾರ ಮಾಡಿದನು. ಆತನ ನಂತರ ಸ್ವರ್ಣಾಂಕಿತವಾದ ಶ್ರೀಚಕ್ರವನ್ನು ಸ್ಥಾಪಿಸಿದರು ಮತ್ತು ನವರಾತ್ರಿಯಲ್ಲಿ ದಶಮಿ ಪರಿಯಂತ ಶ್ರೀಚಕ್ರವನ್ನು ಬರೆದು ಅದರ ಮೇಲೆ ವಿಕ್ರಮಾದಿತ್ಯ ಕರಾರ್ಚಿತ ಶಿವಲಿಂಗವನ್ನು ಇಟ್ಟು ಪೂಜೆ ಮಾಡುವುದು ಇಲ್ಲಿಯ ಸಂಪ್ರದಾಯ. ಅಂದಿನಿಂದ ಇಂದಿನವರೆಗೆ ಪ್ರತ್ಯಕ್ಷವಾಗಿ ನವರಾತ್ರಿಯಲ್ಲಿ ಶ್ರೀಚಕ್ರ ಪೂಜೆ ಮತ್ತು ನಿತ್ಯಪೂಜೆ ನಡೆಯುತ್ತದೆ.