ಬ್ರಹ್ಮಾವರ : ವಾರಂಬಳ್ಳಿ ಗ್ರಾಮದ ಬಿರ್ತಿಯ ಹಲವು ಮನೆಗಳಿಗೆ ತಹಶೀಲ್ದಾರ್ ಭೇಟಿ; ಅಹವಾಲು ಸ್ವೀಕಾರ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಉಡುಪಿ ಜಿಲ್ಲಾಧಿಕಾರಿ ಆದೇಶದಂತೆ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿಯವರು ಗ್ರಾಮ ವಾಸ್ತವ್ಯದ ಬಗ್ಗೆ ವಾರಂಬಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಶನಿವಾರ ವಾರಂಬಳ್ಳಿ ಗ್ರಾಮದ ಬಿರ್ತಿಯ ಹಲವು ಮನೆಗಳಿಗೆ ಭೇಟಿ ನೀಡಿ ಅಹವಾಲುಗಳನ್ನು ಸ್ವೀಕರಿಸಿದರು.
ರಾಷ್ಟ್ರೀಯ ಹೆದ್ದಾರಿ 66 ಮಹೇಶ್ ಆಸ್ಪತ್ರೆ ಎಸ್ ಎಂ ಎಸ್ ಪದವಿ ಪೂರ್ವ ಕಾಲೇಜು ಸೇರಿದಂತೆ ಬಹುತೇಕ ಭಾಗದಲ್ಲಿ ರಸ್ತೆಯ ಬದಿಯಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲದೆ ನೀರು ಸರಾಗವಾಗಿ ಹರಿದು ಹೋಗದೆ ಮನೆಗಳಿಗೆ ನೀರು ನುಗ್ಗುವ ವಿದ್ಯಮಾನವೇ ಹೆಚ್ಚು ಕಂಡು ಬಂತು.
ಕಂದಾಯ ನಿರೀಕ್ಷಕ ಲಕ್ಷ್ಮೀ ನಾರಾಯಣ ಭಟ್ , ಗ್ರಾಮಕರಣಿಕರು ಗ್ರಾಮಸಹಾಯಕರು ವಾರಂಬಳ್ಳಿ ಪಂಚಾಯತ್ ಅಧ್ಯಕ್ಷರು ,ಉಪಾಧ್ಯಕ್ಷರು,ಸದಸ್ಯರು,ಪಂಚಾಯತ್ ಅಭಿವೃದ್ಧಿ ಅಧಿಕಾರಿ,ಸಿಬ್ಬಂದಿ ವರ್ಗದವರು ಜೊತೆಯಲ್ಲಿದ್ದರು.