ವರದಿ : ದಿನೇಶ್ ರಾಯಪ್ಪನಮಠ
ಕೆದೂರು : ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಈ ಶಿಬಿರದ ಸಂಪೂರ್ಣ ಸದೋಪಯೋಗವನ್ನು ಪಡೆದುಕೊಂಡು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಕೆದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಎಸ್ ಶೆಟ್ಟಿ ಹೇಳಿದರು.
ಅವರು ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ತೆಕ್ಕಟ್ಟೆ, ಗ್ರಾಮ ಪಂಚಾಯತ್ ಕೆದೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೆದೂರು ಹಾಗೂ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಬೆಂಗಳೂರು ಇವರ ಸಹಯೋಗದೊಂದಿಗೆ ಕೆದೂರಿನ ಸರ್ಕಾರಿ ಪ್ರೌಢಶಾಲೆ ಸಭಾಂಗಣದಲ್ಲಿ 10 ದಿನಗಳ ಕಾಲ ಉಚಿತವಾಗಿ ನಡೆಯುವ ಧ್ಯಾನ ಯೋಗ ಪ್ರಾಣಾಯಾಮ ಮತ್ತು ಸುದರ್ಶನ ಕ್ರಿಯಾ ಯೋಗ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಲಯನ್ಸ್ ಜಿಲ್ಲೆ ವಲಯ 1 ರ ಅಧ್ಯಕ್ಷ ಕೆ.ಸೀತಾರಾಮ ಶೆಟ್ಟಿ ಶುಭಾಶಂಸನೆಗೈದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮಾಲತಿ, ಪಂಚಾಯತ್ ಸದಸ್ಯರಾದ ಉಲ್ಲಾಸ್ ಕುಮಾರ್ ಹೆಗ್ಡೆ, ಲಯನ್ಸ್ ಅಧ್ಯಕ್ಷ ಧರ್ಮರಾಜ ಮುದಲಿಯಾರ್, ಕಾರ್ಯದರ್ಶಿ ಹರ್ಷವರ್ಧನ್ ಶೆಟ್ಟಿ, ಖಜಾಂಚಿ ಕಿಶೋರ್ ಕುಮಾರ್ ಶೆಟ್ಟಿ, ಲಿಯೋ ಅಧ್ಯಕ್ಷ ಮೋಹನ್ ರಾಜ್ ಮುದಲಿಯಾರ್, ಆಶಾ ಕಾರ್ಯಕರ್ತೆ ಆಶಾ ಮತ್ತು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ನ ಶಿಕ್ಷಕ ದಿನೇಶ್ ತೆಕ್ಕಟ್ಟೆ, ಲಯನ್ ಕ್ಲಬ್ ಸದಸ್ಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘದ ಸದಸ್ಯರುಗಳು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಹರ್ಷವರ್ದನ ಶೆಟ್ಟಿ ಸ್ವಾಗತಿಸಿದರು. ಕಿಶೋರ್ ಕುಮಾರ್ ಶೆಟ್ಟಿ ನಿರೂಪಿಸಿದರು.
Advertisement. Scroll to continue reading.