ವರದಿ : ದಿನೇಶ್ ರಾಯಪ್ಪನಮಠ
ಕೋಟ: ರಾಣಿ ಅಬ್ಬಕ್ಕ ಭಜನಾ ಮಂಡಳಿ, ಮಸ್ಕತ್ ಶರನ್ನವರಾತ್ರಿಯ ಸಂದರ್ಭದಲ್ಲಿ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಗೂಗಲ್ ಮೀಟ್ನೊಂದಿಗೆ ಆನ್ಲೈನ್ ಕಾರ್ಯಕ್ರಮವಾಗಿ ತೆಕ್ಕಟ್ಟೆ ಕೊಮೆಯ ಯಶಸ್ವಿ ಕಲಾವೃಂದದ ಚಿಣ್ಣರು ಹೂವಿನಕೋಲು ನೆರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ದೇವದಾಸ್ ರಾವ್ ಕೂಡ್ಲಿ, ಲಂಬೋದರ ಹೆಗಡೆ, ರಾಹುಲ್ ಕೊಮೆ, ಪೂಜಾ ತೆಕ್ಕಟ್ಟೆ, ಪಂಚಮಿ ವೈದ್ಯ, ಪವನ್, ಕಿಶನ್, ಆರ್.ಬಿ.ಹೆಗಡೆ, ಪರಿಣಿತಾ ವೈದ್ಯ ಭಾಗವಹಿಸಿದ್ದರು.