ವರದಿ : ದಿನೇಶ ರಾಯಪ್ಪನಮಠ
ಕೋಟ: ಶಿಕ್ಷಕ ರಾಷ್ಟ್ರಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಸಂಸ್ಥೆಯ ಸಂಸ್ಥಾಪಕರಾದ ಶಿಕ್ಷಕ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮುಖ್ಯೋಪಾಧ್ಯಾಯ ದಿವಂಗತ ಐರೋಡಿ ಸದಾನಂದ ಹೆಬ್ಬಾರ್ ಹದಿನೆಂಟನೆಯ ವರ್ಷದ ಸಂಸ್ಮರಣಾ ಕಾರ್ಯಕ್ರಮವು ಅ.24 ರಂದು ಸಂಜೆ ಗಂಟೆ 5-30 ಕ್ಕೆ ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ ನಡೆಯಲಿದೆ. ಕಲಾಕೇಂದ್ರದ ಗೌರವಾಧ್ಯಕ್ಷರಾದ ಆನಂದ.ಸಿ.ಕುಂದರರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಕರ್ನಾಟಕ ಸರಕಾರದ ಪೂರ್ವ ಸಚಿವರಾದ ಪ್ರಮೋದ ಮಧ್ವರಾಜ್, ಬೆಂಗಳೂರಿನ ಉದ್ಯಮಿಗಳಾದ ಡಾ| ಗೋವಿಂದ ಬಾಬು ಪೂಜಾರಿ ಉಪಸ್ಥಿತರಿರುತ್ತಾರೆ. ಪತ್ರಕರ್ತರಾದ ಬೈಕಾಡಿ ಅಂಬರೀಷ್ ಭಟ್ಟರು ಸಂಸ್ಮರಣಾ ಮಾತುಗಳನ್ನು ಆಡಲಿದ್ದಾರೆ. ದಿವಂಗತ ಹೆಬ್ಬಾರರ ನೆನಪಿನಲ್ಲಿ ನೀಡಲಾಗುವ “ಸದಾನಂದ ಪ್ರಶಸ್ತಿ”ಯನ್ನು ಈ ವರ್ಷ ಯಕ್ಷಗಾನ ವಿದ್ವಾಂಸರಾದ ಉಜಿರೆ ಅಶೋಕ ಭಟ್ಟರ ಅಭಿನಂದನೀಯ ಭಾಷಣದೊಂದಿಗೆ ಯಕ್ಷಗಾನ ಪ್ರಪಂಚದ ಧೀಮಂತ ಕಲಾವಿದ, ಪ್ರಮುಖ ವಿಮರ್ಶಕ, ಶ್ರೇಷ್ಠ ಅಧ್ಯಾಪಕ, ಸಂಶೋಧಕ, ಸಾಮಾಜಿಕ ಕಾರ್ಯಕರ್ತ, ಸಂಘಟಕರಾದ ಡಾ| ಎಮ್.ಪ್ರಭಾಕರ ಜೋಷಿಯವರಿಗೆ ಅರ್ಪಿಸಿ ಗೌರವಿಸಲಾಗುವುದು.
ಸಭಾ ಕಾರ್ಯಕ್ರಮದ ನಂತರ ಖ್ಯಾತ ಕಲಾವಿದರಿಂದ ಸುಭದ್ರಾ ಕಲ್ಯಾಣ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಲಾಗಿದೆಯೆಂದು ಯಕ್ಷಗಾನ ಕಲಾಕೇಂದ್ರ ಮತ್ತು ಹೆಬ್ಬಾರ ಕುಟುಂಬದ ವೈಕುಂಠ ಹೆಬ್ಬಾರ್ ಪ್ರಕಟಿಸಿರುತ್ತಾರೆ.
Advertisement. Scroll to continue reading.