T20 ವಿಶ್ವಕಪ್ 2021 ರ ಅಂಗವಾಗಿ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದೆ. ಟಾಸ್ ಗೆದ್ದು ಪಾಕಿಸ್ತಾನ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತು. ಗುರಿ ಬೆನ್ನತ್ತಿದ ಪಾಕಿಸ್ತಾನ 17.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 152 ಗಳಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಡಕ್ ಔಟ್ ಆದರು. ಕೆಎಲ್ ರಾಹುಲ್ 8 ಎಸೆತಗಳನ್ನು ಆಡಿ 3 ರನ್ ಗಳಿಸಿ ಪೆವಿಲಿಯನ್ ಸೇರಿದರೆ, ಸೂರ್ಯಕುಮಾರ್ 11 ರನ್ ಗಳಿಸಿ ಔಟಾದರು.
32 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಕೊಹ್ಲಿ ಹಾಗೂ ರಿಷಬ್ ಪಂತ್ ಮುನ್ನಡೆಸಿದರು. ರಿಷಭ್ ಪಂತ್ 30 ಎಸೆತಗಳಲ್ಲಿ 39 ರನ್, ರವೀಂದ್ರ ಜಡೇಜಾ 12 ಎಸೆತಗಳಲ್ಲಿ 13 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ ಏಳು ಎಸೆತಗಳಲ್ಲಿ 11 ರನ್ ಗಳಿಸಿ ಪೆವಿಲಿಯನ್ ಸೇರಿದರು. ಕೊನೆಯಲ್ಲಿ ಭುವನೇಶ್ವರ್ 5 ರನ್ ಗಳಿಸಿದ್ದರಿಂದ ಶಮಿಗೆ ಸ್ಟ್ರೈಕ್ ಸಿಗಲಿಲ್ಲ. ಪಾಕಿಸ್ತಾನದ ಬೌಲರ್ಗಳಲ್ಲಿ ಶಾಹೀನ್ ಅಫ್ರಿದಿ 3 ವಿಕೆಟ್, ಹಸನ್ ಅಲಿ 2 ವಿಕೆಟ್, ಶಾದಬ್ ಖಾನ್ 1 ವಿಕೆಟ್ ಮತ್ತು ರೌಫ್ 1 ವಿಕೆಟ್ ಪಡೆದರು.
Advertisement. Scroll to continue reading.
ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 79, ಬಾಬರ್ ಅಜಾಮ್ 68 ರನ್ ಗಳಿಸಿ ಗೆಲುವು ತಂದರು.