ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಚುನಾವಣೆಯನ್ನು ಕಳೆದ 6ತಿಂಗಳಿನಿಂದ ರಾಜ್ಯ ಸರ್ಕಾರ ಬೇರೆ ಬೇರೆ ಕಾರಣ ಕೊಡುತ್ತಾ ಚುನಾವಣಾ ಆಯೋಗದ ವ್ಯವಸ್ಥೆಯನ್ನು ಕಡೆಗಣಿಸಿ. ಚುನಾವಣೆಗೆ ಹೆದರಿ ಮುಂದೂಡುತ್ತಿದೆ.ಇದು ರಾಜ್ಯ ಸರಕಾರದ ಸರ್ವಾಧಿಕಾರದ ಧೋರಣೆ ಎಂದು ಹೇಳಬೇಕಾಗುತ್ತದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅವರು ಹೆಬ್ರಿಯಲ್ಲಿ ಹೇಳಿದ್ದಾರೆ.
ಕ್ಷೇತ್ರ ವಿಂಗಡಣೆ ಮೀಸಲಾತಿ ಪರಿಷ್ಕರಣೆ ಇದು ಬಿಜೆಪಿ ಪಕ್ಷದ ರಾಜಕೀಯ ತಂತ್ರವಾಗಿದೆ. ಸರಕಾರ ತಕ್ಷಣ ಜಿಲ್ಲಾ ಪಂಚಾಯತ್ ತಾಲ್ಲೂಕು ಚುನಾವಣೆ ಘೋಷಣೆ ಮಾಡಬೇಕೆಂದು ಮತ್ತು
ಕಳೆದ ಮೂರೂವರೆ ವರ್ಷಗಳಿಂದ ಗ್ರಾಮ ಪಂಚಾಯತ್ ಗಳಿಗೆ ರಾಜ್ಯ ಸರ್ಕಾರದಿಂದ ಯಾವುದೇ ವಸತಿ ಮಂಜೂರುಗೊಳಿಸಿಲ್ಲ. ಯಾವುದೇ ಆಶ್ರಯ ನಿವೇಶನ ಮಂಜೂರುಗೊಳಿಸಲಿಲ್ಲ. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ನೀರೆ ಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.
Advertisement. Scroll to continue reading.