ವರದಿ : ದಿನೇಶ್ ರಾಯಪ್ಪನಮಠ
ಕೋಟ: ರಾಘವಾಂಕ, ರನ್ನ, ಪೊನ್ನ, ಪಂಪ, ಲಕ್ಷ್ಮೀಶ, ಕುಮಾರವ್ಯಾಸ, ರತ್ನಾಕರವರ್ಣಿ ಹೀಗೆ ಹಲವಾರು ಕವಿಗಳು ಕರ್ನಾಟಕದಲ್ಲಿ ನಡುಗನ್ನಡ, ಹೊಸಗನ್ನಡದಲ್ಲಿ ಮೆರೆದವರು. ಭಾಷೆ ಎನ್ನುವುದು ನದಿಗಳ ಹಾಗೆ ಅನ್ಯ ಭಾಷೆಗಳ ಸಂಸರ್ಗದಿಂದ ಹರಿದು ಹರಿದು ಸಮುದ್ರವಾಗುವುದು. ಆಶುಕವಿ ಜನಪದವನ್ನು ಬೆಳೆಸಿದ ನಾಡು ನಮ್ಮದು. ಜನಪದ ಕಲೆಗಳು, ಜನಪದ ಹಾಡುಗಳು, ಜನಪದ ನಾಟಕಗಳು ಇವೆಲ್ಲಕ್ಕೂ ಮುಕುಟ ಪ್ರಾಯವಾದದ್ದು ಯಕ್ಷಗಾನ. ಯಕ್ಷಗಾನ ಸಮಗ್ರವಾದ ಜಾನಪದ ಕಲೆ. ಹಾಗೆಯೇ ಕನ್ನಡವೂ ಒಂದು ಸಮಗ್ರವಾದ ಭಾಷೆ. ಇವೆಲ್ಲವನ್ನೂ ಉಳಿಸೋಣ. ಲಕ್ಷೋಪಲಕ್ಷ ಜನ ಕನ್ನಡ ಸಮೂಹಗಾನವನ್ನು ಹಾಡಿ ಸಂಭ್ರಮಿಸಿದ ದಿನವನ್ನು ಕೊಂಡಾಡಿ ನಿವೃತ್ತ ಅಧ್ಯಾಪಕ, ಸಾಂಸ್ಕೃತಿಕ ಚಿಂತಕ ಶ್ರೀನಿವಾಸ ಅಡಿಗ ತೆಕ್ಕಟ್ಟೆ ಮಾತನಾಡಿದರು.
ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ, ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಆಶ್ರಯದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ನೆರವಿನೊಂದಿಗೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ ‘ಕನ್ನಡ ಸಪ್ತಾಹ’ ‘ಮಾತಾಡ್ ಮಾತಾಡ್ ಕನ್ನಡ’ ಐದನೇ ದಿನದ ಕಾರ್ಯಕ್ರಮವನ್ನು ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ರಚಿಸಿದ ಕನ್ನಡ ಪರ ಯಕ್ಷ ಸಾಹಿತ್ಯ ಕೃತಿಯನ್ನು ಅನಾವರಣ ಮಾಡುವುದರ ಮೂಲಕ ನಿವೃತ್ತ ಅಧ್ಯಾಪಕರು, ಸಾಂಸ್ಕೃತಿಕ ಚಿಂತಕರಾದ ತೆಕ್ಕಟ್ಟೆಯ ಶ್ರೀನಿವಾಸ ಅಡಿಗ ಮಾತನಾಡಿದರು.
ಕಾರ್ಯಕ್ರಮದಲ್ಲಿ ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಪ್ರಾಚಾರ್ಯ ಕೆ.ಪಿ. ಹೆಗಡೆ, ಪ್ರಸಿದ್ಧ ಭಾಗವತ ಸುರೇಶ ಶೆಟ್ಟಿ ಶಂಕರನಾರಾಯಣ, ಉಪಸ್ಥಿತರಿದ್ದರು. ವೆಂಕಟೇಶ ವೈದ್ಯ ಗೌರವಾನ್ವಿತರಿಗೆ ಶಾಲು ಹೊದಿಸಿ ಗೌರವಿಸಿ ಸ್ವಾಗತಿಸಿದರು. ಉಪನ್ಯಾಸಕ ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರ್ವಹಸಿದರು. ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಕವಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ರಚಿಸಿದ ‘ಯಕ್ಷ ಕನ್ನಡ ಸ್ವರ’ ಕನ್ನಡ ಪರ ಯಕ್ಷ ಪದಗಳನ್ನು ಪ್ರಸಿದ್ಧ ಬಾಗವತರು ಹಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Advertisement. Scroll to continue reading.