ಕರಾವಳಿ

ಬ್ರಹ್ಮಾವರ : ಸಾಂಪ್ರದಾಯಿಕ ಜಿಲ್ಲಾ ಕಂಬಳ ಸಮಿತಿ ಸಭೆ; ಸರ್ಕಾರದ ಅನುದಾನಕ್ಕೆ ಆಗ್ರಹ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕಂಬಳ‌ ನಡೆಸಲು ರೂ.೨ ಲಕ್ಷಕ್ಕೂ ಅಧಿಕ ವೆಚ್ಚವಾಗುತ್ತಿರುವುದರಿಂದ ಸರ್ಕಾರ ಕನಿಷ್ಟ ಒಂದು ಲಕ್ಷ ಅನುದಾನ‌ ನೀಡುವಂತೆ ಸರ್ಕಾರವನ್ನು ಜಿಲ್ಲೆಯ ಸಚಿವರು, ಶಾಸಕರು ಒತ್ತಾಯಿಸಲು ಪ್ರಯತ್ನಿಸಬೇಕು ಎಂದು ಸಮಿತಿಯ ಜಿಲ್ಲಾಧ್ಯಕ್ಷ ಸುಧಾಕರ ಹೆಗ್ಡೆ ಹೇಳಿದರು.
ಬ್ರಹ್ಮಾವರದಲ್ಲಿ ಶನಿವಾರ ಸಾಂಪ್ರದಾಯಿಕ ಜಿಲ್ಲಾ ಕಂಬಳ ಸಮಿತಿ ಉಡುಪಿ ಜಿಲ್ಲೆಯಲ್ಲಿ 2021-22 ಸಾಲಿನ ಸಾಂಪ್ರದಾಯಿಕ ಕಂಬಳವನ್ನು ಸರ್ಕಾರದ ನಿಯಮಾನುಸಾರ ಕ್ರಮಬದ್ಧವಾಗಿ ಕಂಬಳವನ್ನು ನಡೆಸುವ ಹಾಗು ಸರ್ಕಾರದಿಂದ ಸಿಗುವ ಅನುದಾನದ ಕುರಿತು ಚರ್ಚಿಸಲು ಕಂಬಳದ ಮನೆಯವರು ಹಾಗು ಕೋಣಗಳ ಮಾಲೀಕರ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲ ಸಾಂಪ್ರದಾಯಿಕ ಕಂಬಳಗಳನ್ನು ನಡೆಸುವ ದಿನಾಂಕಗಳನ್ನು ಕಂಬಳ ಕೋಣದ ಮಾಲೀಕರ ಅನುಕೂಲಕ್ಕೆ ತಕ್ಕಂತೆ ನಿಗದಿ ಪಡಿಸಲು, ಪ್ರತಿ ತಾಲ್ಲೂಕಿನಲ್ಲಿಕಂಬಳ‌ ಸಮಿತಿಯ ಬಲವರ್ಧನೆ, ಕೋಣಗಳ‌ ಮಾಲೀಕರ ಒಗ್ಗೂಡುವಿಕೆಗೆ ಪ್ರಯತ್ನಿಸುವ ಬಗ್ಗೆ ಚರ್ಚಿಸಲಾಯಿತು.


ಈ ಸಂದರ್ಭ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿ ಉಡುಪಿ ಜಿಲ್ಲಾಧ್ಯಕ್ಷ ಸುಧಾಕರ ಹೆಗ್ಡೆ, ಕಾರ್ಯದರ್ಶಿ ಪ್ರಮೋದ್ ಶೆಟ್ಟಿ ಹೆರಂಜೆ, ಸಂಘಟನಾ ಕಾರ್ಯದರ್ಶಿ ಪ್ರಥ್ವಿರಾಜ ಶೆಟ್ಟಿ ಬಿಲ್ಲಾಡಿ, ಕರುಣಾಕರ ಶೆಟ್ಟಿ ಹಂದಾಡಿ, ಬೈಂದೂರಿನ‌ ವೆಂಕಟ ಪೂಜಾರಿ ಸಸಿಹಿತ್ಲು, ಸುರೇಶ್ ಕಾಂಡಿತಾರ್ ಬೈಂದೂರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com