ಬ್ರಹ್ಮಾವರ : ಅಜಪುರ ಕರ್ನಾಟಕ ಸಂಘ ಬ್ರಹ್ಮಾವರ ವತಿಯಿಂದ ಕನ್ನಡ ರಾಜ್ಯೋತ್ಸವ ಜಾಥಾ
Published
0
ವರದಿ : ಬಿ.ಎಸ್. ಆಚಾರ್ಯ
ಬ್ರಹ್ಮಾವರ : ಅಜಪುರ ಕರ್ನಾಟಕ ಸಂಘ ಬ್ರಹ್ಮಾವರ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ತಾಯಿ ಭುವನೇಶ್ವರೀ ದೇವಿಯ ಮೆರವಣಿಗೆ ಬ್ರಹ್ಮಾವರ ಎಸ್ ಎಂ ಎಸ್ ಕಾಲೇಜಿನ ಬಳಿಯಿಂದ ರಾಷ್ಟ್ರೀಯ ಹೆದ್ದಾರಿ 66 ಮೂಲಕ ರಥಬೀದಿಯಿಂದ ಬೋರ್ಡ್ ಹೈಸ್ಕೂಲ್ ತನಕ ಸಾಗಿ ಬಂತು.
ಬ್ರಹ್ಮಾವರ ತಹಶೀಲ್ದಾರ ರಾಜಶೇಖರ ಮೂರ್ತಿ ಕನ್ನಡ ತಾಯಿ ಭವನೇಶ್ವರೀಗೆ ಮಾಲಾರ್ಪಣೆ ಮಾಡಿ ಕನ್ನಡ ಧ್ವಜವನ್ನು ಅಜಪುರ ಕರ್ನಾಟಕ ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿಯವರಿಗೆ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಬ್ರಹ್ಮಾವರ ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜು ನಿರ್ಮಲ ಪದವಿ ಪೂರ್ವ ಕಾಲೇಜು ಮತ್ತು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು. ಹಳದಿ ಬಣ್ಣದ ತೆರೆದ ಜೀಪಿನಲ್ಲಿ ಟ್ಯಾಬ್ಲೋ ಮತ್ತು ಭಾರತ ಮಾತೆ ಮತ್ತು ಕನ್ನಡ ತಾಯಿ ಭುವನೇಶ್ವರಿಯ ನವತಾರೆಯರು ಮೆರವಣಿಗೆಗೆ ಮೆರಗು ನೀಡಿದರು. ಅಜಪುರ ಕರ್ನಾಟಕ ಸಂಘದ ಪದಾಧಿಕಾರಿಗಳು ಶಾಲಾ ಪ್ರಿನ್ಸಿಪಾಲ್ ಮತ್ತು ಶಿಕ್ಷಕರು, ಸಿಬ್ಬಂದಿಗಳು ಮೆರವಣಿಗೆಯಲ್ಲಿದ್ದರು.