ಕುಂದಾಪುರ : ಸ್ಥಳೀಯ ಕನ್ನಡಾಭಿಮಾನಿ ಡಾ. ರಾಜ್ ಕುಮಾರ್ ಸಂಘಟನೆಯ ವತಿಯಿಂದ ಹೊಸ ಬಸ್ಸು ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನದ ಹಿನ್ನಲೆಯಲ್ಲಿ ಅತ್ಯಂತ ಸರಳವಾಗಿ ಜರುಗಿದ ಈ ಕಾರ್ಯಕ್ರಮವನ್ನು ಟ್ರಾವೆಲ್ಸ್ ಉದ್ಯಮಿ ಸತೀಶ್ ಹೊಳ್ಳ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸುಮಂತ್ ಟ್ರಾವೆಲ್ಸ್ ನ ಮುಕುಂದ ಭಟ್ ಕನ್ನಡ ಧ್ವಜಾರೋಹಣವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಸುನಿಲ್ ಖಾರ್ವಿ ತಲ್ಲೂರು, ಸಚಿನ್ ಖಾರ್ವಿ, ಅಗಸ್ಟಿನ್ ಡಿ.ಸೋಜ, ಕಿಶನ್ ಖಾರ್ವಿ, ನವೀನ್ ಕುಮಾರ್, ಡುಂಡಿರಾಜ್, ಶಾಮಿಯಾನ ಪ್ರಭಾಕರ್ ಖಾರ್ವಿ, ವಿಘು ಖಾರ್ವಿ, ಶ್ರೀಧರ ಗಾಣಿಗ ಮುಂತಾದವರು ಉಪಸ್ಥಿತರಿದ್ದರು. ಡಾ. ರಾಜ್ ಸಂಘಟನೆಯ ಅಧ್ಯಕ್ಷ ರತ್ನಾಕರ ಪೂಜಾರಿ ಸ್ವಾಗತಿಸಿದರು. ಕೊಡಿ ಪ್ರಶಾಂತ್ ಗಾಣಿಗ ಕಾರ್ಯಕ್ರಮವನ್ನು ನಿರೂಪಿಸಿದರು.