ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಇತ್ತೀಚೆಗೆ ಅಗಲಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಇಲ್ಲಿನ ಸಂಗಮ್ ಫ್ರೆಂಡ್ಸ್ ಶನಿವಾರ ರಾತ್ರಿ ವಿಶಿಷ್ಟ ರೀತಿಯಲ್ಲಿ ಭಾಷ್ಪಾಂಜಲಿ ಅರ್ಪಿಸಿದ್ದಾರೆ.
ಚಿಕ್ಕನ್ ಸಾಲ್ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪ ಶನಿವಾರ ರಾತ್ರಿ ಸೇರಿದ್ದ ಪುನೀತ್ ರಾಜಕುಮಾರ ಅವರ ಅಭಿಮಾನಿಗಳು ತಮ್ಮ ಕೈಯಲ್ಲಿ ಉರಿಯುತ್ತಿರುವ ಹಣತೆಯನ್ನು ಹಿಡಿದುಕೊಂಡು ಮರೆಯಾದ ನೆಚ್ಚಿನ ನಟನಿಗೆ ಅಭಿಮಾನದ ಅಶ್ರುತರ್ಪಣ ಅರ್ಪಿಸಿದ್ದಾರೆ.
Advertisement. Scroll to continue reading.
ಈ ಸಂದರ್ಭದಲ್ಲಿ ಮಾತನಾಡಿದ ಸಂಗಮ್ ಫ್ರೆಂಡ್ಸ್ ನ ಸುರೇಂದ್ರ ಕಾಂಚನ್ ಅವರು, ಸಣ್ಣ ವಯಸ್ಸಿನಲ್ಲಿಯೇ ಅಭಿಮಾನಿಗಳ ಹೃದಯ ಸಿಂಹಾಸನ ಅಲಂಕರಿಸಿದ್ದ ಅವರ ಅಗಲಿಕೆಯ ನೋವು ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಇರುತ್ತದೆ. ಸಮಾಜಕ್ಕೆ ಆಧಾರವಾಗಿ ಬದುಕಿದ್ದ ಅವರ ಆದರ್ಶಗಳು ಅಭಿಮಾನಿಗಳಿಗೆ ದಾರಿ ದೀವಿಗೆ ಆಗಲಿ ಎಂದರು.
ರಾಜೇಂದ್ರ ಸಂಗಮ್, ಸಂತೋಷ್ ಸಂಗಮ್, ಸಂದೀಪ್ ಸಂಗಮ್, ಸುಮಂತ್ ಸಂಗಮ್, ದೀಪು ಸಂಗಮ್, ಸುಧೀರ್ ಸಂಗಮ್, ಅಶ್ವಿನ್ ಸಂಗಮ್, ಸುಚಿತ್ರ ಉಪಸ್ಥಿತರಿದ್ದರು.
Advertisement. Scroll to continue reading.