ವರದಿ : ದಿನೇಶ್ ರಾಯಪ್ಪನಮಠ
ಕೋಟ: ಆನೆಗುಡ್ಡೆ ಶ್ರೀ ವಿನಾಯಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಭಾಶಿ ಇಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ದಾನಿಗಳಿಂದ ಕೊಡಮಾಡಿದ ಯುಪಿಎಸ್ ಹಸ್ತಾಂತರ ಕಾರ್ಯಕ್ರಮ ಶನಿವಾರ ನೆರವೆರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಂ.ಸಿ ಯ ಅಧ್ಯಕ್ಷ ರಾಜೇಶ್ ಪೈ ವಹಿಸಿದ್ದರು. ಈ ಸಂದರ್ಭ ವಿವಿಧ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು. ದಾನಿಗಳಾದ ಮಂಜುನಾಥ ರಾವ್ ಕುಂದಾಪುರ, ಶಾಲಾ ಮುಖ್ಯ ಶಿಕ್ಷಕಿ ಶರ್ಮಿಳಾ ಜಿ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜೇಶ್ ಪೈ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶರ್ಮಿಳಾ ಜಿ. ಪ್ರಾಸ್ತಾವನೆ ಸಲ್ಲಿಸಿ, ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಮಾನ್ವಿ ಮತ್ತು ಅಭೀತ್ ಜೆ . ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ಪೂರ್ವಿಕಾ ವಂದಿಸಿದರು.
Advertisement. Scroll to continue reading.
ಆನೆಗುಡ್ಡೆ ಶ್ರೀ ವಿನಾಯಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಭಾಶಿ ಇಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ದಾನಿಗಳಿಂದ ಕೊಡಮಾಡಿದ ಯುಪಿಎಸ್ ನ ದಾನಿಗಳಾದ ಮಂಜುನಾಥ ರಾವ್ ಕುಂದಾಪುರ ಹಸ್ತಾಂತರಿಸಿದರು.
Advertisement. Scroll to continue reading.