ಬ್ರಹ್ಮಾವರ : ಬಾರಕೂರು ಶ್ರೀಪಟ್ಟಾಭಿರಾಮ ಚಂದ್ರ ದೇವಸ್ಥಾನದಲ್ಲಿ ದೀಪೋತ್ಸವದ ಸಂಭ್ರಮ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ಶ್ರೀ ಪಟ್ಟಾಭಿರಾಮ ಚಂದ್ರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ದಿಪೋತ್ಸವ ರಂಗಪೂಜೆ ಮತ್ತು ನಾನಾ ಧಾರ್ಮಿಕ ಕಾರ್ಯಕ್ರಮ ಶನಿವಾರ ಜರುಗಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಾವ್ಯಶ್ರೀ ಅಜೇರು ಇವರಿಂದ ಯಕ್ಷಗಾನ ವೈಭವ ಜರುಗಿತು. ಇದೇ ಸಂದರ್ಬದಲ್ಲಿ ಕಾವ್ಯಶ್ರೀ ಅವರನ್ನು ದೇವಸ್ಥಾನದ ವತಿಯಿಂದ ಶ್ರೀಮತಿ ರಾಧಾ ಜೆ,ಕಾಮತ್ ಪೂರ್ಣಿಮಾ ಭಂಡಾರಿಯವರು ಸಾಂಪ್ರದಾಯಕವಾಗಿ ಹೂವು ಕುಂಕುಮ ಮತ್ತು ಬಾಗಿನ ನೀಡಿ ಸನ್ಮಾನಿಸಿದರು.
ದೇವಸ್ಥಾನದ ಪ್ರಗತಿಗೆ ಮತ್ತು ಹಲವಾರು ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಮೋಹನ್ ದಾಸ್ ಕಾಮತ್ ಇವರನ್ನು ಸನ್ಮಾನಿಸಲಾಯಿತು. ವೆಂಕಟರಮಣ ಭಂಡಾರಕರ್, ಬಾರಕೂರು ಶಾಂತಾರಾಮ ಶೆಟ್ಟಿ ಗಣಪತಿ ಕಾಮತ್ ಇನ್ನಿತರರು ಉಪಸ್ಥಿತರಿದ್ದರು.
ಮದ್ದಳೆಯಲ್ಲಿ ಚಂದ್ರಶೇಖರ ಆಚಾರ್ಯ, ಚಂಡೆಯಲ್ಲಿ ಪ್ರಶಾಂತ್ ವಗೆನಾಡು ಮತ್ತು ಸಾಯಿಸುಧಾ ಯಕ್ಷಗಾನ ವೈಭವ ವನ್ನು ನಿರೂಪಿಸಿದ್ದರು.