ಬ್ರಹ್ಮಾವರ : ಹಿಂದೂ ಜಾಗರಣ ವೇದಿಕೆ ಬಾರಕೂರು ಘಟಕದ ಉದ್ಘಾಟನೆ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಹಿಂದೂ ಜಾಗರಣ ವೇದಿಕೆ ಬಾರಕೂರು ಘಟಕದ ಉದ್ಘಾಟನೆ ಮತ್ತು ಭಾರತ ಮಾತಾ ಪೂಜೆ ಭಾನುವಾರ ಬಿಲ್ಲವ ಸಂಘದ ಗುರು ದೇವ ಭವನದಲ್ಲಿ ಜರುಗಿತು. ಶೆಟ್ಟಿಗಾರ್ ಇಂಡಸ್ಟ್ರೀಸ್‍ನ ಶ್ರೀನಿವಾಸ ಶೆಟ್ಟಿಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೂ ಜಾಗರಣ ವೇದಿಕೆ ಹಿಂದುತ್ವವನ್ನು ಕಾಪಾಡಲು ಯಾವೂದೇ ನಿರ್ಧಾರವನ್ನು ನಾಯಕರಲ್ಲಿ ತಿಳಿಸದೆ ಯುವಕರು ಮುಂದುವರಿಯಬೇಡಿ ಎಂದರು.
ಬಾರಕೂರು ಘಟಕದ ಅಧ್ಯಕ್ಷರಾಗಿ ರಾಘವೇಂದ್ರ ಪೂಜಾರಿ, ಮತ್ತು ಇನ್ನಿತರ ಪದಾಧಿಕಾರಿಗಳಾಗಿ ಸ್ವರಾಜ್, ಗುರುರಾಜ್ , ಗೌತಮ್, ಶ್ರೀನಿಧಿ, ಕಿರಣ್ ಕುಂದರ್ ಆಯ್ಕೆಗೊಂಡರು.
ಮುಖ್ಯ ಭೌದ್ಧಿಕ ಆಗಿ ರಮೇಶ್ ಕಲ್ಲೋಟ್ಟೆ , ತಾಲೂಕು ಕಾರ್ಯದರ್ಶಿ ಸಾಜನ್ ಶೆಟ್ಟಿ, ಬಿಲ್ಲವ ಸಂಘದ ಅಧ್ಯಕ್ಷ ಜಯಾನಂದ ಪೂಜಾರಿ , ಬಾರಕೂರಿನ ಉದ್ಯಮಿ ಗಣಪತಿ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.