ಕರಾವಳಿ

ಕೋಟ : ಪಡುಕೆರೆ ಕಾಲೇಜಿನಲ್ಲಿ ಗ್ರಂಥಾಲಯ ಸಪ್ತಾಹ

0

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕೆರೆಯಲ್ಲಿ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಇತ್ತೀಚಿಗೆ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಹಿಂದಿ ಉಪನ್ಯಾಸಕ ಶ್ರೀನಿವಾಸ ಸೋಮಯಾಜಿ ಉದ್ಘಾಟಿಸಿ ಮಾತನಾಡಿ, ಸುಖ:ಮಯ ಬದುಕು, ಜೀವನೋತ್ಸಾಹ ಎಲ್ಲವು ವ್ಯಕ್ತಿ ಕೇಂದ್ರಿತ. ನಮ್ಮ ಬದುಕಿನ ಸಂತೋಷ ಕ್ರೀಯಾಶೀಲತೆಯನ್ನು ನಾವೇ ಕಂಡುಕೊಳ್ಳಬೇಕು, ಇದಕ್ಕೆ ಅಗತ್ಯವಾದ ಅಂತ:ಸತ್ವ ಪುಸ್ತಕ ಓದುವ ಹವ್ಯಾಸದಿಂದ, ಗ್ರಂಥಾಲಯದ ಸದ್ಬಳಕೆಯಿಂದ ಬೆಳೆಯಬಹುದು. ಇದೇ ಮುಂದೆ ಆದರ್ಶ ನಾಗರೀಕರಣವಾಗಿ ಬೆಳೆಯಲು ಸಹಾಯಕ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಸ್.ಎಂ.ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಗಣಪತಿ ಭಟ್, ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಭೇಟಿ ನೀಡುವ ಪರಿಪಾಠ ಬೆಳೆಸಿಕೊಳ್ಳಬೇಕು ಇದಕ್ಕೆ, ಎನ್ನುತ್ತಾ ಹೇಗೆ ಭಾರತದಲ್ಲಿ ಗ್ರಂಥಾಲಯದ ಪಿತಾಮಹ ಎಸ್.ಆರ್. ರಂಗನಾಥನ್ ರವರ ಜೀವನ-ಸಾಧನೆ ಹಾಗೂ ಭಾರತದಲ್ಲಿ ಗ್ರಂಥಾಲಯದ ಬೆಳವಣಿಗೆಗೆ ಅವರ ಕೊಡುಗೆಯನ್ನು ಪ್ರೇರಣೆಯಾಗಿ ತೆಗೆದುಕೊಳ್ಳ ಬೇಕೆಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ ಗಾಂವಕರ್ ಇಂದಿನ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ, ಇದನ್ನು ಗಮನದಲಿರಿಸಿ ಆಯೋಜಿಸುತ್ತಿರುವ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿ ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.

Advertisement. Scroll to continue reading.

ಕಾರ್ಯಕ್ರಮ ಆಯೋಜಿಸಿದ ಕಾಲೇಜಿನ ಗ್ರಂಥಪಾಲಕ ಕೃಷ್ಣ ಸಾಸ್ತಾನ ಮಾತನಾಡಿ, ಗ್ರಂಥಾಲಯ ಸಪ್ತಾಹದ ಅಂಗವಾಗಿ ಸರಣಿ ಉಪನ್ಯಾಸ ಮಾಲಿಕೆಯನ್ನು ಹಮ್ಮಿಕೊಳ್ಳಲಾಗಿದ್ದು, ವರ್ತಮಾನ ಪತ್ರಿಕೆಗಳು ಮತ್ತು ಲೋಕಜ್ಞಾನ ಕುರಿತಾಗಿ ರಾಜಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಶಾಂತ ಎನ್, ಪದವಿ ಶಿಕ್ಷಣದಲ್ಲಿ ಪರಾಮಾರ್ಶನ ಗ್ರಂಥಗಳ ಅಧ್ಯಯನ ಮಹತ್ವ ಕುರಿತಾಗಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಮಂಜುನಾಥ ಆಚಾರಿ, ಜನಪದ ಸಾಹಿತ್ಯದ ಕುರಿತಾಗಿ ಕನ್ನಡ ವಿಭಾಗದ ಮುಖ್ಯಸ್ಥ ನಾಗರಾಜ ವೈದ್ಯ, ಡಿಜಿಟಲ್ ಯುಗದಲ್ಲಿ ಮಾಹಿತಿ ಹುಟುಕಾಟದ ವ್ಯಾಪ್ತಿ ಕುರಿತಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳದ ಗ್ರಂಥಪಾಲಕ ವೆಂಕಟೇಶ್, ಓದುವ ಹವ್ಯಾಸ-ಗ್ರಂಥಾಲಯ ಮತ್ತು ಯುವಜನತೆ ಕುರಿತಾಗಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ. ಮುರಳಿ ಎನ್ ಉಪನ್ಯಾಸ ನೀಡಲಿದ್ದಾರೆ ಜೊತೆಗೆ ದಿನಕ್ಕೊಂದರಂತೆ ಸ್ಪರ್ಧಾತ್ಮಕ ಪರೀಕ್ಷೆಗಳು, ನಿಘಂಟುಗಳು ಮತ್ತು ವಿಶ್ವಕೋಶಗಳು, ಜಾನಪದ ಸಾಹಿತ್ಯ ಕೃತಿಗಳು, ಇಂಗ್ಲಿಷ್ ಸಾಹಿತ್ಯ ಕೃತಿಗಳು, ಪೂರ್ಣಚಂದ್ರ ತೇಜಸ್ವಿ ಕೃತಿಗಳ ಪುಸ್ತಕ ಪ್ರದರ್ಶನ ಹಮ್ಮಿಕೊಳಲಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ, ಐಕ್ಯೂಎಸಿ ಸಂಚಾಲಕ ರವಿ ಪ್ರಸಾದ್ ಕೆ.ಜಿ ಶುಭ ಹಾರೈಸಿದರು.

ರಾಜಕೀಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್ ನೀಲಾವರ ಪ್ರಾಸ್ತಾವಿಕ ಸ್ವಾಗತಿಸಿ, ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಮಂಜುನಾಥ ಆಚಾರಿ ಕಾರ್ಯಕ್ರಮ ನಿರೂಪಿಸಿದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com