ರಾಷ್ಟ್ರೀಯ

ಆಂಧ್ರ ಪ್ರದೇಶಕ್ಕೆ ಅಮರಾವತಿ ಒಂದೇ ರಾಜಧಾನಿ : ಸಿಎಂ ಜಗನ್ ಮೋಹನ ರೆಡ್ಡಿ ಘೋಷಣೆ

0

ಆಂಧ್ರಪ್ರದೇಶ : ರಾಜ್ಯಕ್ಕೆ ಒಂದೇ ರಾಜಧಾನಿ. ಅದು ಅಮರಾವತಿ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೋಮವಾರ ಘೋಷಿಸಿದ್ದಾರೆ.

ಮೂರು ರಾಜಧಾನಿ ಮಸೂದೆಯನ್ನ ಹಿಂಪಡೆದು ತನ್ನ ನಿರ್ಧಾರವನ್ನ ಹೈಕೋರ್ಟ್‌ಗೆ ತಿಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

ಈ ಕ್ಷೇತ್ರವನ್ನ ನಾನು ಪ್ರೀತಿಸುತ್ತೇನೆ. ಅಮರಾವತಿಯನ್ನ ರಾಜಧಾನಿ ಎನ್ನಲು ಯಾವುದೇ ವಿರೋಧವಿಲ್ಲ. ಇಡೀ ರಾಜ್ಯದ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ ಎಂದು ಅವರು ಹೇಳಿದ್ದಾರೆ. ವಿಶಾಖಪಟ್ಟಣಂ ರಾಜ್ಯದ ಅತಿದೊಡ್ಡ ನಗರ ಎಂದು ಕರೆಯಲಾಗುತ್ತದೆ. ಇಲ್ಲಿ ಎಲ್ಲಾ ಮೂಲಸೌಕರ್ಯಗಳಿವೆ ಎಂದು ತಿಳಿಸಿದರು. ಒಂದಷ್ಟು ಠೇವಣಿ ಇಟ್ಟರೆ ವೈಜಾಗ್, ಹೈದರಾಬಾದ್ ದೊಡ್ಡ ನಗರಗಳಿಗೆ ಪೈಪೋಟಿ ನೀಡುವ ಸ್ಥಿತಿ ನಿರ್ಮಾಣವಾಗಲಿದೆ. ವಾಸ್ತವವನ್ನ ಅರಿತು 3 ರಾಜಧಾನಿಗಳು ಎಲ್ಲಾ ಪ್ರದೇಶಗಳ ಅಭಿವೃದ್ಧಿ ಬಗ್ಗೆ ಮಸೂದೆ ತಂದಿವೆ ಎಂದು ಜಗನ್ ಹೇಳಿದರು.

Advertisement. Scroll to continue reading.

ಇನ್ನು ಅಮರಾವತಿಯಲ್ಲಿ ಕನಿಷ್ಠ ರಸ್ತೆ, ಚರಂಡಿ, ವಿದ್ಯುತ್‌ ವ್ಯವಸ್ಥೆ ಕಲ್ಪಿಸಲು 1 ಲಕ್ಷ ಕೋಟಿ ವೆಚ್ಚವಾಗಲಿದೆ ಎಂದು ಹಿಂದಿನ ಸರಕಾರ ಹೇಳಿತ್ತು. ಇಂದು ರೂ.1 ಲಕ್ಷ ಕೋಟಿ ವೆಚ್ಚ ರೂ. 7ಲಕ್ಷ ಕೋಟಿ. ರಾಜ್ಯಕ್ಕೆ ಕನಿಷ್ಠ ಸೌಲಭ್ಯ ಕಲ್ಪಿಸಲು ಕೂಡ ಹಣವಿಲ್ಲದಿದ್ದರೆ ರಾಜಧಾನಿ ಕಟ್ಟಲು ಸಾಧ್ಯವೇ ಎಂದು ಜಗನ್ ನೇರವಾಗಿ ಪ್ರಶ್ನಿಸಿದರು.

ವೈಎಸ್‌ಆರ್ ಕಾಂಗ್ರೆಸ್ ಸರ್ಕಾರವು ರಾಜ್ಯಕ್ಕೆ ಮೂರು ವಿಭಿನ್ನ ರಾಜಧಾನಿಗಳನ್ನು ಪ್ರಸ್ತಾಪಿಸಿತ್ತು. ಅಮರಾವತಿ  ಶಾಸಕಾಂಗ ರಾಜಧಾನಿ, ವಿಶಾಖಪಟ್ಟಣಂ ಕಾರ್ಯಾಂಗ ರಾಜಧಾನಿ ಮತ್ತು ಕರ್ನೂಲ್ ನ್ಯಾಯಾಂಗ ರಾಜಧಾನಿ ಎನ್ನಲಾಗಿತ್ತು. ಕಳೆದ ವರ್ಷ, ಕೇಂದ್ರ ಗೃಹ ಸಚಿವಾಲಯವು ಆಂಧ್ರಪ್ರದೇಶದ ಹೈಕೋರ್ಟ್‌ಗೆ ರಾಜ್ಯದ ರಾಜಧಾನಿಯನ್ನು ರಾಜ್ಯ ಸರ್ಕಾರವೇ ನಿರ್ಧರಿಸುವ ವಿಷಯ ಎಂದು ತಿಳಿಸಿತ್ತು ಮತ್ತು ಅದರಲ್ಲಿ ಕೇಂದ್ರದ ಪಾತ್ರವಿಲ್ಲ ಎಂದು ಹೇಳಿತ್ತು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com