ದೊಡ್ಡನಗುಡ್ಡೆ : ಗುಂಡಿಬೈಲು ಪಂಚ ಜುಮಾದಿ ದೈವಸ್ಥಾನದ ಹಿಂಭಾಗದಲ್ಲಿ
ಬಾಬುರಾವ್ ಆಚಾರ್ಯ ಅವರ ಮನೆಯ ಚಿನ್ನಾಭರಣ ಕಳವಾಗಿತ್ತು. ಅವರು ಪಂಚ ಜುಮಾದಿ ದೈವದ ಮೊರೆ ಹೋಗಿದ್ದರು. “ನನ್ನ ಚಿನ್ನ ಆಭರಣವನ್ನು ಮತ್ತೆ ಹಿಂತಿರುಗಿಸಿ ಕೊಡು” ಎಂದು ಭಕ್ತಿಯಿಂದ ದೈವದಲ್ಲಿ ಪ್ರಾರ್ಥನೆ ಮಾಡಿದ್ದರು.
ಎರಡು ದಿವಸದಲ್ಲಿ ದರೋಡೆಕೋರರನ್ನು ಹಿಡಿದು ಕೊಟ್ಟು ಅವರ ಚಿನ್ನಾಭರಣವನ್ನು ಮತ್ತೆ ಅವರ ಕೈ ಸೇರುವಂತಾಯಿತು.
ಪಂಚ ಜುಮಾದಿ ದೈವಸ್ಥಾನದ ವಾಟರದ ಮರದ ಅಡಿಯಲ್ಲಿ ಗಂಟುಕಟ್ಟಿ ಇಡಲಾಗಿತ್ತು. ಇಂದು ಪೊಲೀಸರು ದರೋಡೆ ಮಾಡಿದ
ದರೋಡೆಕೋರರನ್ನು ಕರೆತಂದು ವಿಚಾರಣೆ ನಡೆಸಿದಾಗ ಅವರು ಬಾಯ್ಬಿಟ್ಟಿದ್ದಾರೆ.
ನಂಬಿದವರ ಕೈ ಬಿಡುವುದಿಲ್ಲ:
ಪಂಚ ಜುಮಾದಿ ದೈವವು ತನ್ನ ಗಡುವಾಡು ಸ್ಥಳದಲ್ಲಿ ದರೋಡೆ ಮಾಡಿದ ಚಿನ್ನವನ್ನು ತೆಗೆದುಕೊಂಡು ಹೋಗಲು ಬಿಡಲಿಲ್ಲ. ಇದು ನಿಜವಾದ ದೈವಭಕ್ತರು ಕಷ್ಟದ ಸಮಯದಲ್ಲಿ ಭಕ್ತಿಯಿಂದ ಬೇಡಿದರೆ ತುಳುನಾಡಿನ ದೈವ ದೇವರು ಯಾವುದೇ ಸಮಯದಲ್ಲಿ ಕೈಬಿಡುವುದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಪಂಚ ಜುಮಾದಿ ದೈವಸ್ಥಾನದ ಗುರಿಕಾರರಾದ ನಿತಿನ್ ಕುಮಾರ್
ಹಾಗೂ ಪ್ರಧಾನ ಅರ್ಚಕರಾದ ವಿನೋದ್ ಶೆಟ್ಟಿ ಮಾಹಿತಿ ತಿಳಿದ್ದಾರೆ.
Advertisement. Scroll to continue reading.