ಬಾರ್ಕೂರು ರೈಲ್ವೆ ನಿಲ್ದಾಣದಲ್ಲಿ ಮುಂಬಯಿ – ಮಂಗಳೂರು ಮತ್ಸ್ಯಗಂಧ ರೈಲು ನಿಲುಗಡೆಯಾಗದ ಹಿನ್ನೆಲೆ ಮನವಿಗೆ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟದ ನಿರ್ಧಾರ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರ್ಕೂರು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿದ್ದ ಮುಂಬಯಿ – ಮಂಗಳೂರು ಮತ್ಸ್ಯಗಂಧ ರೈಲು ಬಾರಕೂರು ನಿಲ್ದಾಣದಲ್ಲಿ ಕೋವಿಡ್ ಬಳಿಕ ನಿಲುಗಡೆ ಮಾಡದ ಕಾರಣ ಬಾರಕೂರು ರೈಲು ನಿಲುಗಡೆ ಹೋರಾಟ ಸಮಿತಿಯ ನೇತ್ರತ್ವದಲ್ಲಿ ಸೋಮವಾರ ಸಂಜೆ ಪಟ್ಟಾಭಿರಾಮಚಂದ್ರ ದೇವಸ್ಥಾನದ ಸಭಾಂಗಣದಲ್ಲಿ ಬಾರ್ಕೂರು ಗ್ರಾಮಪಂಚಾಯತ್ ಅಧ್ಯಕ್ಷ ಶಾಂತಾರಾಮ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ಜರುಗಿತು. ಈ ಸಂದರ್ಭ ಇಲ್ಲಿನ ಪರಿಸರದ ದೇವಸ್ಥಾನ, ಮಸೀದಿ, ಚರ್ಚ್, ಸಂಘ ಸಂಸ್ಥೆಯ ಮುಖಂಡರುಗಳು ಭಾಗವಹಿಸಿ ಅಭಿಪ್ರಾಯ ವ್ಯಕ್ತ ಲಪಡಿಸಿ ಬಾರಕೂರು ನಾಗರಿಕರು ಮಾತ್ರವಲ್ಲ, ಮುಂಬಾಯಿ ಬೆಂಗಳೂರು ಭಾಗದಲ್ಲಿರುವ ಇಲ್ಲಿನ ಜನರ ಮೂಲಕ ರೈಲ್ವೆ ಇಲಾಖೆಗೆ ಒತ್ತಡ ಹೇರುವ ಕಾರ್ಯ ಮಾಡಿ ಬಾರಕೂರು ರೈಲ್ವೆ ನಿಲ್ದಾಣದಲ್ಲಿ ಮುಂಬಯಿ – ಮಂಗಳೂರು ಮತ್ಸ್ಯಗಂಧ ರೈಲು ನಿಲುಗಡೆ ಸೇರಿದಂತೆ ಅನೇಕ ಸಮಸ್ಯೆಯನ್ನು ಬಗೆಹರಿಸಲು ಬೆಂಬಲ ವ್ಯಕ್ತ ಪಡಿಸಿದರು.
ಹೋರಾಟದ ನೇತೃತ್ವ ವಹಿಸಿದ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಮಾತನಾಡಿ, ರೈಲು ನಿಲುಗಡೆಯಾಗಬೇಕು ಎನ್ನುವ ಇಚ್ಚೆ ಎಲ್ಲಾ ಜನರಿಗೆ ಇದೆ. ಆದರೆ ಮುಂದೆ ಹೋಗುವ ಜನರ ಕೊರತೆಯಿಂದ ಬಾರಕೂರು ರೈಲು ನಿಲ್ದಾಣ ಅನೇಕ ಸಮಸ್ಯೆಯನ್ನು ಎದುರಿಸುವಂತೆ ಆಗಿದೆ. ಸಮಸ್ಯೆಯನ್ನು ಮನವಿ ಮೂಲಕ ಸಂಬಂಧ ಪಟ್ಟವರಿಗೆ ಮಾಡಿ 15 ದಿನ ಅವಧಿ ನೀಡುವ ನಮ್ಮ ಮನವಿಗೆ ಸ್ಪಂದಿಸದಲ್ಲಿ ಮತ್ತೆ ಉಗ್ರ ಹೋರಾಟ ಮಾಡಿಯಾದರೂ ಬಾರಕೂರಿನಲ್ಲಿ ಮತ್ಸ್ಯಗಂಧ ರೈಲು ನಿಲುಗಡೆ ಮಾಡುವುದಲ್ಲದೆ ನಿಲ್ದಾಣ ಮೇಲ್ದರ್ಜೆ ಮಾಡುವಂತೆ ನಿಮ್ಮ ಸಹಕಾರ ಇದ್ದರೆ ತಾನು ನೇತೃತ್ವ ವಹಿಸುತ್ತೇನೆ ಎಂದರು.
ರೈಲು ನಿಲುಗಡೆಯಾಗದೆ ಇತಿಹಾಸ ಪ್ರಸಿದ್ದ ದೇವಾಲಯಗಳ ನಗರ ಬಾರಕೂರಿಗೆ ಬರುವ ಪ್ರವಾಸಿಗರಿಗೆ ಮತ್ತು ಪ್ರಯಾಣಿಕರಿಗೆ ಹಾಗೂ ಸುತ್ತಮುತ್ತಲಿನ 20 ಕಿಮೀ ದೂರದ ಜನರಿಗೆ ತುಂಬಾ ತೊಂದರೆ ಅನುಭವಿಸಬೇಕಾಗುವುದನ್ನು ತಪ್ಪಿಸಲು 100 ಸಂಘ ಸಂಸ್ಥೆಗಳು ಜೊತೆಯಾಗಿದೆ.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪರಿಸರದ ಗ್ರಾಮ ಪಂಚಾಯತಿ ಅಧ್ಯಕ್ಷರುಗಳಾದ ಚಂದ್ರಶೇಖರ್ ಶೆಟ್ಟಿ, ಪಾಂಡುರಂಗ ಶೆಟ್ಟಿ, ಲತಾ, ಉದಯ್ ಪೂಜಾರಿ ಉಪಸ್ಥಿತರಿದ್ದರು.