ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶ್ರೀಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀಕ್ಷೇತ್ರ ನಾಗರಡಿ ಬಾರಕೂರು ಬಂಡೀಮಠದಲ್ಲಿ ಕಾರ್ತೀಕ ಮಾಸದ ಅಂಗವಾಗಿ ಸೋಮವಾರ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ರಂಗಪೂಜೆ, ದೀಪೋತ್ಸವ ಮತ್ತು ಸರೋವರದಲ್ಲಿ ಗಂಗಾ ಪೂಜೆ ಜರುಗಿತು.
ಈ ಸಂದರ್ಭ ಶ್ರೀಮಹಾಲಿಂಗೇಶ್ವರ ಭಜನಾ ಮಂಡಳಿಯಿಂದ ಭಜನೆ ಜರುಗಿತು.
ಜಯರಾಮ ಆಡಿಗ ಮತ್ತು ತಮ್ಮಣ್ಣ ಅಡಿಗರಿಂದ ನಾನಾ ಧಾರ್ಮಿಕ ಕಾರ್ಯಕ್ರಮ ಜರುಗಿತು.
ನಾನಾ ಭಾಗದ ಭಕ್ತರು ಆಗಮಿಸಿ ದೀಪ ಬೆಳಗಿ ಗಂಗೆ ಪೂಜೆಯಲ್ಲಿ ಭಾಗವಹಿಸಿದರು.
ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಮತ್ತು ದೀಪೋತ್ಸವ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
Advertisement. Scroll to continue reading.