ನವದೆಹಲಿ : ರಾಷ್ಟ್ರೀಯ ರಾಜಧಾನಿಯಿಂದ ಅಯೋಧ್ಯೆಗೆ ಶ್ರೀ ರಾಮ್ ಲಲ್ಲಾ ದರ್ಶನಕ್ಕಾಗಿ ‘ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನೆ’ಯಡಿ ಮುಂದಿನ ವಾರದಿಂದ ಉಚಿತ ಯಾತ್ರೆಗೆ ಕಳುಹಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಂದು ಘೋಷಣೆ ಮಾಡಿದ್ದಾರೆ.
‘ಅಯೋಧ್ಯೆಗೆ ನಮ್ಮ ಮೊದಲ ರೈಲು ಡಿಸೆಂಬರ್ 3 ರಂದು ಹೊರಡಲಿದೆ. ನೋಂದಣಿಗಳು ಪ್ರಾರಂಭವಾಗಿವೆ. ಇನ್ನು ಈ ರೈಲಿನಲ್ಲಿ 1000 ಜನರು ಅಯೋಧ್ಯೆಗೆ ತೆರಳಲಿದ್ದಾರೆ. ಈ ಯಾತ್ರಾ ಯೋಜನೆಗೆ ಹಿರಿಯ ನಾಗರಿಕರಿಂದ ಹೆಚ್ಚಿನ ಬೇಡಿಕೆ ಇದೆ ಎಂದು ತಿಳಿಸಿದ್ದಾರೆ.
ಅಯೋಧ್ಯೆ ಸೇರಿದಂತೆ ವಿವಿಧ ಸ್ಥಳಗಳಿಗೆ ತೀರ್ಥಯಾತ್ರೆಗಾಗಿ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬರುತ್ತಲಿವೆ. ಸಿದ್ಧತೆಗಳು ಪೂರ್ಣಗೊಂಡ ನಂತರ, ಇತರ ಸ್ಥಳಗಳಿಗೆ ಯಾತ್ರಿಕರನ್ನ ಕಳುಹಿಸುತ್ತೇವೆ ಎಂದು ದೆಹಲಿ ಸರ್ಕಾರದ ತೀರ್ಥ ಯಾತ್ರೆ ವಿಕಾಸ್ ಸಮಿತಿಯ ಅಧ್ಯಕ್ಷ ಕಮಲ್ ಬನ್ಸಾಲ್ ಮಾಹಿತಿ ನೀಡಿದ್ದಾರೆ.
Advertisement. Scroll to continue reading.